ಸಾಲದ ಬಾದೆ ತಾಳಲಾರದೆ ರೈತ ಆತ್ಮಹತ್ಯೆ
Farmer commits suicide, unable to bear the burden of debt
ಇಂಡಿ 18 : ಸಾಲದ ಬಾದೆ ತಾಳಲಾರದೆ ಜೀವನ ಜಿಗುಪ್ಸೆ ಗೊಂಡು ಮನನೊಂದು ನೇಣು ಹಾಕಿಕೊಂಡು ಸಾವಿಗೆ ಶರಣಾದ ಘಟನೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ನಡೆದಿದೆ. ಮೃತಪಟ್ಟ ರೈತ ನಾಗಪ್ಪ ಬೀಮಶ್ಯಾ ಅಥರ್ಗಾ(57) ಎಂದು ತಿಳಿದು ಬಂದಿದೆ.ಮೃತ ಪಟ್ಟ ರೈತನು ಕೋಟಕಾ ಮಹೀಂದ್ರ ಬ್ಯಾಂಕ್ ಶಾಖೆಯಲ್ಲಿ ಟ್ರಾಕ್ಟರ್ ಸಾಲವಾಗಿ ಹದಿನೈದು ಲಕ್ಷ ರೂಪಾಯಿಗಳು ಹಾಗೂ ತಡವಲಗಾ ಸಹಕಾರಿ ಸಂಘದಲ್ಲಿ ಅರವತ್ತೈದು ಸಾವಿರ ರೂಪಾಯಿಗಳು ಹಾಗೂ ಇತರೆ ಕೈಗಡವಾಗಿ ಸುಮಾರು ಐದು ಲಕ್ಷ ರೂಪಾಯಿಗಳು ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಹಾಗೂ ರೈತ ನಾಗಪ್ಪ ತನ್ನ ಸ್ವಂತ ಹೊಲ ಹೊಂದಿದ್ದು ಸರ್ವೇ ನಂಬರ್ 14 ಮತ್ತು 1-17 ಎಕರೆ ಜಮೀನು ಹೊಂದಿದ್ದೆ ಹಾಗೂ ಗ್ರಾಮದ ಇತರರ ರೈತರ ಜಮೀನು ಕೂಡಾ ಮಾಡಿಕೊಂಡಿದ್ದ ಸುಮಾರು ಹತ್ತು ಹನ್ನೆರಡು ಎಕರೆ ಹೊಲದಲ್ಲಿ ಸಾಲ ಸೂಲ ಮಾಡಿ ಕಬ್ಬು ಹಚ್ಚಿದ ಆದರೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಒಣಗಿ ನಿಂತಿರುವ ಕಬ್ಬು ಆದರೆ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೈತ ನಾಗಪ್ಪ ಅಥರ್ಗಾ ಅವರಿಗೆ ಪತ್ನಿ ಗೌರಾಬಾಯಿ ಅಥರ್ಗಾ(50) ಮತ್ತು ಸಂಗಪ್ಪ ನಾಗಪ್ಪ ಅಥರ್ಗಾ (38) ಚಂದ್ರಶೇಖರ ನಾಗಪ್ಪ ಅಥರ್ಗಾ ( 35) ಸಂತೋಷ ನಾಗಪ್ಪ ಅಥರ್ಗಾ (30) ಮೂವರು ಮಕ್ಕಳನ್ನು ಇದ್ದಾರೆ. ಈ ಕುರಿತು ಹೊರ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಸ್ಥಳಕ್ಕೆ ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ಅನೀತಾ ರಾಠೋಡ ಬೇಟಿ ನೀಡಿ ಪರೀಶೀಲನೆ ಮಾಡಿದರೂ. ಹಾಗೂ ಕಂದಾಯ ಇಲಾಖೆಯ ವತಿಯಿಂದ ತಡವಲಗಾ ಆಡಳಿತ ಅಧಿಕಾರಿ ಮಾಹಾತೇಶ ಗುರುಬಟ್ಟಿ ಬೇಟಿ ನೀಡಿ ಪಂಚನಾಮೆ ಮಾಡಿಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 