ಆರಿ​‍್ಬ. ತಿಮ್ಮಾಪೂರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಅಭಿಮಾನಿಗಳಿಂದ ಪ್ರತಿಭಟನೆ

ಆರಿ​‍್ಬ. ತಿಮ್ಮಾಪೂರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಅಭಿಮಾನಿಗಳಿಂದ ಪ್ರತಿಭಟನೆ Fans protest to give Arib. Thimmapur a place in the cabinet

 

ಲೋಕದರ್ಶನ ವರದಿ, 

ಜಮಖಂಡಿ 20 : ಮಾಜಿ ಸಚಿವ ಶಾಸಕ ಆರ್,ಬಿ, ತಿಮ್ಮಾಪೂರ ಜ್ಯಾತ್ಯಾತೀತ ನಾಯಕರು, ಹಿರಿಯ ಕಾಂಗ್ರೆಸ್ ಧುರಿಣ ಸಾಕಷ್ಟು ಅನುಭವಿ ರಾಜಕಾರಿಣಿ ಕ್ರೀಯಾಶೀಲ ವ್ಯಕ್ತಿತ್ವದ ತಿಮ್ಮಾಪೂರ ಅವರಿಗೆ ಸಿಎಂ ಡಿ,ಕೆ,ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸೂಕ್ತವಾದ ಸ್ಥಾನ ಮಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡ, ಟ್ರೇಡ್ ಯುನಿಯನ್ ಜಿಲ್ಲಾಧ್ಯಕ್ಷ ತೌಫೀಕ ಪಾರ್ಥನಳ್ಳಿ ಆಗ್ರಹಿಸಿದರು.  

ನಗರದ ರಮಾನಿವಾಸ ಮಂದಿರದ ಆವರಣದಲ್ಲಿ ದಲಿತ ಸಂಘಗಳ ಒಕ್ಕೂಟ ಹಾಗೂ ತಿಮ್ಮಾಪೂರ ಅಭಿಮಾನಿಗಳಿಂದ ಏರಿ​‍್ಡಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅತ್ಯಂತ ಸರಳ ಸ್ವಭಾವದ ಪ್ರಾಮಾಣಿಕ ರಾಜಕಾರಣಿಯಾಗಿರುವ ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.  

ಜಿಲ್ಲೆಯ ಅಹಿಂದ ನಾಯಕರು, ರೈತಪರ ಹೋರಾಟಗಾರರು ಹಾಗೂ ರೈತರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತ ರಾಜ್ಯದ ರೈತಾಪಿ ವರ್ಗಕ್ಕೆ ಹೆಚ್ಚಿನ ಪರಿಹಾರ ದೊರಕಿಸಿ ಕೊಡುವಲ್ಲಿ ಶ್ರಮವಹಿಸಿ ಜನಾನುರಾಗಿ ಸಚಿವ ಸ್ಥಾನ ನಿರ್ವಹಿಸಿರುವ ಅವರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂದು ಮನವಿ ಮಾಡಿದರು. 

ದಲಿತ ಸಂಘರ್ಷ ಸಮೀತಿ ನಾಗವಾರ ಬಣದ ರಾಜ್ಯ ಸಂಚಾಲಕ ಶ್ಯಾಮರಾವ ಘಾಟಗೆ ಮಾತನಾಡಿ, ಆರ್,ಬಿ,ತಿಮ್ಮಾಪೂರ ಜ್ಯಾತ್ಯಾತೀತ ವ್ಯಕ್ತಿವಾಗಿದ್ದಾರೆ. ಸಭ್ಯ, ಸರಳ ಸ್ವಭಾವದ ವ್ಯಕ್ತಿಯಾಗಿರುವ ಇವರಿಗೆ ಮೊದಲನೆ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕಿತ್ತು. ಯಾವುದೇ ಖಾತೆಯನ್ನು ನಿಭಾಯಿಸುವ ಸಾಮರ್ಥ್ಯವಿರುವ ಅವರಿಗೆ ಎರಡನೇ ಹಂತದಲ್ಲಾದರೂ ಸಚಿವ ಸ್ಥಾನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯನ್ನು ನೀಡಿದರೇ ಇನ್ನು ಉತ್ತಮವಾಗಿ ನಿರ್ವಹಣೆ ಮಾಡಬಲ್ಲರು ಕಾಂಗ್ರೆಸ್ ಹೈ ಕಮಾಂಡ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಮುತ್ತಣ್ಣ ಮೇತ್ರಿ, ಫಕೀರಸಾಬ ಬಾಗವಾನ, ನಾಗಪ್ಪ ಹೆಗಡೆ, ಮಾರುತಿ ಮರೇಗುದ್ದಿ, ರಾಜು ಲೋಖಂಡೆ, ಸುನೀಲ ಘಾಟಗೆ, ಪರಸು ಮಾಂಗ, ರೇಣುಕಾ ಮಡ್ಡಿಮನಿ, ಗೌರವ್ವಾ ಮುಂಡಗನೂರ, ಪಾರವಾ ಅಲಕನೂರ, ಗಂಗವ್ವಾ ಮುಂಡಗನೂರ, ಗೀತಾ ಬಡಿಗೇರ, ಮಹಾದೇವಿ ಖೆಬ್ಬಾಣಿ, ಯಲ್ಲವ್ವಾ ಜಿಡ್ಡಿಮನಿ, ಮಹಾದೇವಿ ರೊಳ್ಳಿ, ಮಹಾದೇವಿ ಗಿರಿಸಾಗರ, ಪುಂಡಲೀಕ ಮಾದರ, ಪರಸಪ್ಪಾ ಮಾದರ,ರೇಣಪ್ಪಾ ದಡ್ಡಿಮನಿ ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.