ಲೋಕದರ್ಶನ ವರದಿ
ಕಾಗವಾಡ 03: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಳೆ ಸಂಪೂರ್ಣ ಕೈಕೊಟ್ಟಿದ್ದು. ಕಾಗವಾಡ ಕ್ಷೇತ್ರದ ಎಲ್ಲ ಗ್ರಾಮಗಳ ಜನತೆ ಕುಡಿಯುವ ನೀರು, ದನಕರುಗಳಿಗೆ ಮೇವಿನ ಸಮಸ್ಯೆ ಎದುರಿಸಲು ಎಲ್ಲ ಗ್ರಾಮದ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ರಾಜಕೀಯ ಬಿಟ್ಟು ಒಂದಾಗಿ ಸಹಕರಿಸಿ, ಬರಗಾಲ ಎದುರಿಸಲು ಎಲ್ಲರು ಸಿದ್ಧರಾಗಿರಿ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕರೆ ನೀಡಿದ್ದಾರೆ.
ಶನಿವಾರ ರಂದು ಕಾಗವಾಡ ಮತಕ್ಷೇತ್ರದ ಜುಗೂಳ, ಶಿರಗುಪ್ಪಿ, ಕಾಗವಾಡ, ಉಗಾರ, ಮಂಗಸೂಳಿ, ಮೋಳೆ, ಮದಭಾವಿ, ಖಿಳೆಗಾಂವ ಸೇರಿದಂತೆ 24 ಗ್ರಾಮ ಪಂಚಾಯತಿಗೆ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು. ಸಭೆಯಲ್ಲಿ ಶಾಸಕರು ಬರಗಾಲ ಎದುರಿಸಲು ಅನೇಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ದನಕರುಗಳಿಗೆ ಮೇವು ಬ್ಯಾಂಕ ಪ್ರಾರಂಭಿಸುವ ವ್ಯವಸ್ಥೆ:
ಕಾಗವಾಡ ಕ್ಷೇತ್ರದ ಬಹುತೆಕ ಗ್ರಾಮಗಳಲ್ಲಿ ದನಕರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಎದುರಾಗುತ್ತಿದೆ. ಬರುವ ಎರಡು ದಿನಗಳಲ್ಲಿ ಮೇವಿನ ಬ್ಯಾಂಕ್ ಪ್ರಾರಂಭಿಸಲು ಇಲಾಖೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಯಾವ ಸ್ಥಳದಲ್ಲಿ ಮೇವಿನ ಬ್ಯಾಂಕಿನ ಅವಶ್ಯಕತೆಯಿದೆ, ಅದರ ಬಗ್ಗೆ ಸ್ಥಳೀಯ ಪಂಚಾಯತಿಯ ಆಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಇಲಾಖೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕೆಂದು ಶಾಸಕರು ಹೇಳಿದರು.
ಸರಕಾರದಿಂದ ಅನುದಾನದ ವಿಳಂಭವಾದರೆ ನಾನು ಪ್ರಾರಂಭದಲ್ಲಿ ಹಣ ನೀಡುತ್ತೇನೆ:
ಬರಸ್ಥೀತಿ ಎದುರಿಸಲು ರಾಜ್ಯ ಸರಕಾರ ಸಂಪೂರ್ಣ ಸಿದ್ಧತೆ ಮಾಡಿದೆ. ಜಿಲ್ಲಾಧಿಕಾರಿಗಳು ತಾಲೂಕಾ ದಂಡಾಧಿಕಾರಿಗಳಿಗೆ ಅದೇಶ ನೀಡಿದ್ದಾರೆ. ನೀರು ಹಾಗೂ ಮೇವಿನ ಕೋರತೆ ಬಾರದಂತೆ ನೋಡಿಕೊಳ್ಳಲು ಮುಂದಾಗಿದ್ದೇವೆ. ಇಲಾಖೆಯಿಂದ ಹಣ ಸಕಾದಲ್ಲಿ ಬಾರದೆಯಿದ್ದರು ನಾನು ಪ್ರಾರಂಭದಲ್ಲಿ ಹಣ ನೀಡಿ ಸಹಕರಿಸುತ್ತೇನೆ. ಆದರೆ, ಎಲ್ಲರು ಸಹಕರಿಸಿರಿ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಲಾಭ ತಗೆದುಕೊಳ್ಳಿರಿ:
ಗ್ರಾಮ ಪಂಚಾಯತಿಗಳಿಗೆ ಸಧ್ಯಕ್ಕೆ ದೊರೆಯುವ ಅನುದಾನ ಕೊರತೆಯಿದೆ. ಅಭಿವೃದ್ಧಿ ಮಾಡಲು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿ ಮಾಡಲು ಸಾಧ್ಯವಿದೆ. ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿ, ಅಧಿಕಾರಿಗಳು, ಆಧ್ಯಕ್ಷರು ಮುಂದಾಗಿ ಬರುವ ಒಂದು ವಾರದಲ್ಲಿ ಪ್ರತಿಯೊಂದು ಗ್ರಾಮಕ್ಕೆ 1 ಕೋಟಿ ರೂ.ಗಳ ಕ್ರೀಯಾ ಯೋಜನೆ ತಕ್ಷಣೆ ನೀಡಿರಿ. ಕಾಮಗಾರಿಗಳಲ್ಲಿ ಅವ್ಯವಹಾರ ಆಗದಂತೆ ಪ್ರಾಮಾಣಿಕವಾಗಿ ನೋಡಿಕೊಳ್ಳಿರಿ. ನಿಮ್ಮಗೆ ಎಲ್ಲ ರೀತಿಯಿಂದ ಸಹಕರಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಸಭೆಯಲ್ಲಿ ಜುಗೂಳ, ಕುಸನಾಳ, ಉಗಾರ, ಮೋಳೆ, ಮದಭಾವಿ, ಜಕ್ಕಾರಟ್ಟಿ, ಮುಂತಾದ ಪಂಚಾಯತಿಗಳ ಆಧ್ಯಕ್ಷರು ಉದ್ಯೋಗ ಖಾತ್ರಿ ಯೋಜನೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದಾಗ ನಾವು ನಿಮ್ಮ ಬೆನ್ನಿಗೆ ಇದ್ದೇವೆ ಹೆರದಬೇಡಿ ಎಂದು ಶಾಸಕರು ತಾಲೂಕಾ ಪಂಚಾಯತಿ, ಕಾರ್ಯನಿವರ್ಾಹಕ ಅಧಿಕಾರಿ ಆರ್.ಎನ್.ಬಂಗಾರಪ್ಪನವರ್ ಭರವಸೆ ನೀಡಿದರು.
ಬರೆಗಾಲ ಎದುರಿಸಲು 24*7 ಅವಧಿಯಲ್ಲಿ ಎಲ್ಲರು ಕಾರ್ಯನಿರ್ವಹಿಸುವದಿದೆ. ಎಲ್ಲ ಪಂಚಾಯತಿಯ ಪಿಡಿಒ ಮೊಬೈಲ್ ಸ್ವಿಚ್ಚ್ಆಫ್ ಮಾಡತಕ್ಕದಲ್ಲಾ. ಮತ್ತು, ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಉಳಿಯಬೇಕು. ಹೋರ ಹೋಗಬೇಕಾದರೆ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಹೋಗಬೇಕೆಂದು ತಾಕಿತ ಮಾಡಿದರು.
ನಾನು ಒಬ್ಬ ರೈತ:
ನಾನು ರೈತ ಕುಟುಂಬದವನು.ರೈತನಾಗಿ ದಿನನಿತ್ಯ ದನಕರುಗಳ ವ್ಯವಸ್ಥೆ, ಬೆಳೆಗಳಿಗೆ ನೀರು ಹಾಯಿಸುವುದು, ಕಬ್ಬು ಕಟಾವನಿ ಮಾಡಿ ಸಾಗಿಸುವುದು, ನೇಗಲು ಹೊಡೆದ ರೈತನಾಗಿದ್ದೇನೆ. ರೈತನ ಸಮಸ್ಯೆ ನನಗೆ ಸಂಪೂರ್ಣವಾಗಿ ಅರ್ಥವಿದೆ. ನಿಮ್ಮ ಸಮಸ್ಯೆಗೆ ಸ್ಪಂದಿಸುವುದು ನನ್ನ ಆಧ್ಯ ಕರ್ತವ್ಯ ಎಂದು ಶಾಸಕ ಶ್ರೀಮಂತ ಪಾಟೀಲ ಸಭೆಯಲ್ಲಿ ಹೇಳಿದರು.
ಮಹಾರಾಷ್ಟ್ರದಿಂದ ನೀರು ಹರಿಸುವ ಪ್ರಯತ್ನ:
ಕಾಗವಾಡ ಕ್ಷೇತ್ರದ ನೇರೆಯ ಮಿರಜ ತಾಲೂಕಿನಿಂದ ಮಹಾರಾಷ್ಟ್ರದ ಮೈಶಾಳ ಯೋಜನೆ ನೀರು ಹರಿಯುತ್ತಿದ್ದು. ಈ ನೀರು ಬರಸ್ಥೀತಿ ಎದುರಿಸುವ ಗ್ರಾಮಗಳಿಗೆ ಅಗ್ರಣಿ ಹಳ್ಳದ ಮುಖಾಂತರ ನೀರು ಹರಿಸಲು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಅಧಿಕಾರಿಗಳಿಗೆ ಸಂಪಕರ್ಿಸಿದ್ದು, ನೀರು ಹರಿಸುವ ಭರವಸೆ ನೀಡಿದ್ದ ಬಗ್ಗೆ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಸಭೆಯಲ್ಲಿ ಗ್ರಾಪಂ ಆಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ ಮ್ಯಾನೇಂಜರ್ ಉದಯಗೌಡಾ ಪಾಟೀಲ, ನರೆಗಾ ಯೋಜನೆಯ ಅಧಿಕಾರಿಗಳಾದ ಅರುಣ ಮಾಚಕ್ಕನವರ, ಸೇರಿದಂತೆ ಅನೇಕರಿದ್ದರು.