ಮನೆಗೆ ಹಚ್ಚಿ ವಿದ್ಯುತ್ ಕಂಬ ಭಯದಲ್ಲಿ ಕುಟುಂಬಸ್ಥರು ಬೇರೆಡೆ ಸ್ಥಳಾಂತರಿಸಲು ಒತ್ತಾಯ

ಮನೆಗೆ ಹಚ್ಚಿ ವಿದ್ಯುತ್ ಕಂಬ ಭಯದಲ್ಲಿ ಕುಟುಂಬಸ್ಥರು ಬೇರೆಡೆ ಸ್ಥಳಾಂತರಿಸಲು ಒತ್ತಾಯ  Family demands relocation due to fear of the electric pole installed right next to their house

ಲಕ್ಷ್ಮೇಶ್ವರ  23: ಪಟ್ಟಣದ ವಾರ್ಡ್‌ ನಂಬರ್ 21ರಲ್ಲಿ ಬರುವ ಮೋಮೀನ ಗಲ್ಲಿಯ ಇಸ್ಮಾಯಿಲ್ ಮುಳಗುಂದ ಎಂಬುವರು ಮನೆಗೆ ಹಚ್ಚಿ ಬೀದಿ ದೀಪದ ವಿದ್ಯುತ್ ಕಂಬ ಇರುವುದರಿಂದ ಕುಟುಂಬಸ್ಥರು ವಿದ್ಯುತ್ ಭಯದಿಂದ ಮನೆಯಲ್ಲಿ ವಾಸ ಮಾಡಲು ಭಯಪಡುವಂತಾಗಿದೆ ಅದಕ್ಕಾಗಿ ಮನೆಗೆ ಹಚ್ಚಿರುವ ವಿದ್ಯುತ್ ಕಂಬವನ್ನು ಬೇರಡೆ ಸ್ಥಳಾಂತರಿಸುವಂತೆ ಹೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಇಸ್ಮಾಯಿಲ್ ಮುಳಗುಂದ ಕುಟುಂಬಸ್ಥರು ಒತ್ತಾಯಿಸಿದ್ದಾರೆ ಈ ಕುರಿತು ಮಾತನಾಡಿದ ಅವರು ಕಳೆದ ಐದಾರು ತಿಂಗಳ ಹಿಂದೆ ಹೆಸ್ಕಾಂ ಇಲಾಖೆಗೆ ನಮ್ಮ ಮನೆಗೆ ಹಚ್ಚಿರುವ ವಿದ್ಯುತ್ ಕಂಬ ದಿಂದ ನಮಗೆ ಭಯದ ವಾತಾವರಣ ನಿರ್ಮಾಣವಾಗಿದೆ ನಮ್ಮ ಮನೆಗೆ ಹಚ್ಚಿ ಬೀದಿ ದೀಪದ ಸರ್ವಿಸ್ ವಯರ್ಗಳು ಮತ್ತು ಕಂಬ ಇರುವುದರಿಂದ ನಮಗೆ ಭಯ ಉಂಟಾಗುತ್ತಿದೆ. 

 ಅದಕ್ಕಾಗಿ ನಮ್ಮ ಮನೆಗೆ ಹಚ್ಚಿರುವ ವಿದ್ಯುತ್ ಕಂಬವನ್ನು ಬೆರೇಡೆ ಸ್ಥಳಾಂತರಿಸಿ ನಮಗೆ ಆಗುತ್ತಿರುವ ಭಯದ ವಾತಾವರಣವನ್ನು ಕಡಿಮೆ ಮಾಡಿ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಲಕ್ಷ್ಮೇಶ್ವರ ಪಟ್ಟಣದ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಿದ್ದೇವೆ ಆದರೆ ಇಲ್ಲಿವರೆಗೂ ಹೆಸ್ಕಾಂ ಇಲಾಖೆಯವರು ಕಂಬವನ್ನು ಬೇರೆಡೆ ಸ್ಥಳಾಂತರಿಸುವ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದರಿಂದ ನಮ್ಮ ಕುಟುಂಬಕ್ಕೆ ವಿದ್ಯುತ್ ಭಯ ಕಾಡುತ್ತಿದೆ.

ವಿದ್ಯುತ್ತಿನಿಂದ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ನೇರ ಹೊಣೆಗಾರರು ಹೆಸ್ಕಾಂ ಇಲಾಖೆಯವರು ಆಗುತ್ತಾರೆ  ಅದಕ್ಕಾಗಿ ಇನ್ನಾದರೂ ನಮ್ಮ ಮನೆಗೆ ಹಚ್ಚಿರುವ ಬೀದಿ ದೀಪದ ಕಂಬವನ್ನು ಬೇರೆಡೆ ಸ್ಥಳಾಂತರಿಸಿ ನಮಗೆ ಆಗುತ್ತಿರುವ ಭಯದ ವಾತಾವರಣವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ ಹಾಗೂ ಡಿಎಸ್‌ಎಸ್ ಮುಖಂಡರಾದ ಸುರೇಶ ನಂದೆಣ್ಣವರ ಅವರು ಸಹ ಹೆಸ್ಕಾಂ ಇಲಾಖೆ ಅಧಿಕಾರಿಗಳು ಭಯದ ವಾತಾವರಣದಲ್ಲಿರುವ ವಿದ್ಯುತ್ ಕಂಬವನ್ನು ಬೇರೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ