ಬದುಕುವ ಕಲೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿ: ಆತನೂರೆ
ಗೋಕಾಕ 30: ಬದುಕಿಗಾಗಿ ಕಾಲೇಜು ಶಿಕ್ಷಣವಾದರೆ, ಪಠ್ಯೇತರ ಚಟುವಟಿಕೆಗಳು ಬದುಕುವ ಕಲೆ ಕಲಿಸುತ್ತವೆ ಎಂದು ಗೋಕಾಕ ನ್ಯಾಯಾಲಯದ ಪ್ರಧಾನ ಹಿರಿಯ ನ್ಯಾಯಾಧೀಶ ಉಮೇಶ ಎಸ್. ಆತ್ನುರೆ ಹೇಳಿದರು.
ನಗರದ ಪ್ರತಿಷ್ಠಿತ ಜೆ. ಎಸ್. ಎಸ್. ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ 30ರಂದು ಹಮ್ಮಿಕೊಂಡಿದ್ದ 2025-26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಕ್ರೀಡಾ ಹಾಗೂ ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಾಳ್ಮೆ, ಆತ್ಮವಿಶ್ವಾಸ. ಪ್ರಾಮಾಣಿಕತೆ, ಸಕಾರಾತ್ಮಕತೆ, ಸಮಯದ ಸದುಪಯೋಗ ಮುಂತಾದ ಹಲವಾರು ಆದರ್ಶಗಳನ್ನು ಬೆಳಿಸಿಕೊಳ್ಳುವುದರ ಮುಖೇನ ಜೀವನದ ಮೌಲ್ಯಗಳನ್ನು ಅರಿತು ಭವಿಷ್ಯತ್ತಿನ ಜವಾಬ್ದಾರಿಯುತ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನ ವ್ಹಿ. ಎ. ಕಡಕೋಳ ವಹಿಸಿದ್ದರು. ಅತಿಥಿಗಳಾಗಿ ನಿರ್ದೇಶಕ ಎಂ. ಡಿ. ಚುನಮರಿ, ಕಾರ್ಯದರ್ಶಿ ಆರ್. ಎಂ. ವಾಲಿ, ದೈಹಿಕ ನಿರ್ದೇಶಕ ಎ. ಎಲ್. ದರಗದ ಹಾಗೂ ವಿದ್ಯಾರ್ಥಿ ಮುಖ್ಯ ಪ್ರತಿನಿಧಿ ಬಿ. ಎಂ. ಮಾಲ್ದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಬಿ. ಎಮ್. ತುರಡಗಿ ಸ್ವಾಗತಿಸಿದರು. ಡಾ. ಯು. ಎಮ್. ಶಾಗೋಟಿ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ನಿರೂಪಣೆಯನ್ನು ಡಾ. ಕೃಷ್ಣಮೂರ್ತಿ ಎಮ್. ಎಸ್. ನಿರ್ವಹಿಸಿದರೆ, ಡಾ. ಎ. ವ್ಹಿ. ಪಾಟೀಲ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.