ಮನೆಯಲ್ಲಿ ಇಟ್ಟಿದ್ದ ಸ್ಫೋಟಕ ಸಿಡಿದು ಮನೆಗೆ ಹಾನಿ: ಯಾವುದೇ ಜೀನಹಾನಿ ಇಲ್ಲ

ಮನೆಯಲ್ಲಿ ಇಟ್ಟಿದ್ದ ಸ್ಫೋಟಕ ಸಿಡಿದು ಮನೆಗೆ ಹಾನಿ: ಯಾವುದೇ ಜೀನಹಾನಿ ಇಲ್ಲ Explosive device planted in house explodes, damaging house; no casualties reported

ಕಾರವಾರ ೨೨: ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ವಾಸುದೇವ ಎಂಬುವವರ  ಮನೆಯಲ್ಲಿ ಸಂಗ್ರಹಿಸಿದ್ದ ಸ್ಫೋಟಕ ವಸ್ತು,  ಸ್ಫೋಟಗೊಂಡ ಪರಿಣಾಮ  ಮನೆಗೆ ಹಾನಿಯಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಮನೆಯೊಂದರಲ್ಲಿ  ಸಂಗ್ರಹಿಸಿ ಇಡಲಾಗಿತ್ತು  ಎಂದು ಶಂಕಸಲಾದ  ನಾಡ ಬಾಂಬ್ (?) ಏಕಾಏಕಿ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ವಾಸುದೇವ ಅವರಿಗೆ ಸೇರಿದ ಇಟ್ಟಂಗಿ ಗೋಡೆಯ ಮನೆಯ ಒಂದು ಭಾಗ  ಕುಸಿದಿದೆ.  ಸುತ್ತಮುತ್ತಲಿನ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಹಾಗೂ ಕಿಟಕಿಗಳಿಗೆ ಹಾನಿಯಾಗಿದೆ. ಭಾರೀ ಸದ್ದು ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು,  ಆತಂಕ ನಿರ್ಮಾಣವಾಗಿತ್ತು. 

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಯಾರಿಗೂ  ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಸ್ಫೋಟದ ಬಳಿಕ ಮನೆ ಮಾಲೀಕ  ವಾಸುದೇವ  ಕುರೂರು ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.  ಅಲ್ಲದೆ, ಮನೆಯಲ್ಲಿ ಇನ್ನೂ ಕೆಲವು ಸ್ಪೂಟಕ ಅಥವಾ ಜಿಲಿಟಿನ್ ಕಡ್ಡಿ  ಉಳಿದಿರುವ ಸಾಧ್ಯತೆ ಇರುವುದರಿಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಪತ್ತೆ ದಳ ಕಾಳಗಿನಕೊಪ್ಪಕ್ಕೆ ತೆರಳಿದೆ. ಘಟನೆಯ ಕುರಿತು ಮಾಹಿತಿ ಪಡೆದ ಹಳಿಯಾಳ ಪೊಲೀಸರು ಸ್ಥಳ ಪರಿಶೀಲನೆ 

ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಹಾಗೂ ನಾಡ ಬಾಂಬ್ ಅಥವಾ ಜಿಲಿಟಿನ್ ಕಡ್ಡಿ ಗಳನ್ನು ಏಕೆ ಸಂಗ್ರಹಿಸಲಾಗಿತ್ತು ಎಂಬ ಬಗ್ಗೆ ತನಿಖೆ ಪ್ರಾರಂಭವಾಗಿದೆ.