ಪ್ರವಾಸೋದ್ಯಮ, ಸಾರಿಗೆ ಸಂಪರ್ಕ, ಕೃಷಿ, ಅರಣ್ಯ, ಉದ್ಯೋಗ ಸೃಷ್ಟಿಗೆ ಒತ್ತು

ಕಾರವಾರ 26:  ಉತ್ತರ ಕನ್ನಡ ಜಿಲ್ಲಾಲೋಕಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಬಿಜೆಪಿ  ಬಿಡುಗಡೆ  ಮಾಡಿದ್ದು ಪ್ರವಾಸೋದ್ಯಮ, ಸಾರಿಗೆ ಸಂಪರ್ಕ, ಕೃಷಿ, ಅರಣ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿದೆ. ಸಂಸದರ  ಸಂಚಾರಿ ಕಚೇರಿ ತೆರೆಯುತ್ತೇವೆ. ಪ್ರತಿ ಗ್ರಾಮ ಪಂಚಾಯತ್ ಬೆಸೆಯುವ ಉದ್ದೇಶ ಸಂಚಾರಿ ಕಚೇರಿಯದ್ದಾಗಿದ್ದು, ಯೋಜನೆಗಳ ಅನುಷ್ಠಾನದ ಉದ್ದೇಶವಿದೆ ಎಂದು ರವಿ ಹೆಗಡೆ ಹೂವಿನಮನೆ ಹೇಳಿದರು .ಕಾರವಾರದಲ್ಲಿ ಸುದ್ದಿಗೋಷ್ಟಿ ಮಾಡಿದ ಅವರುದೇಶದಲ್ಲೇ ವಿಶಿಷ್ಟವಾದ ಲೋಕಸಭಾ ಕ್ಷೇತ್ರ ಇದುಭವಿಷ್ಯದ ಮುನ್ನೋಟವನ್ನು ಸಂಕಲ್ಪ ಪತ್ರದಲ್ಲಿ ನೀಡಲಾಗಿದೆ .ಸಕ್ಷಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.ಪ್ರವಾಸೋದ್ಯಮ, ಸಾರಿಗೆ ಸಂಪರ್ಕ, ಕೃಷಿ, ಅರಣ್ಯ, ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಮುನ್ನೋಟದ ಸಂಕಲ್ಪ ಪತ್ರದಲ್ಲಿ ನೀಡಲಾಗಿದೆ. ರಾಜ್ಯ ಕೇಂದ್ರ ಸರ್ಕಾರದ ಸಹಕಾರದಲ್ಲಿ ಈ ಯೋಜನೆ ಜಾರಿಯಾಗಲಿವೆ.   

ಆದರೆ ಜನರ ಸಹಭಾಗಿತ್ವ ಬೇಕು ಎಂದರು ಸಂಕಲ್ಪ ಪತ್ರದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತೇವೆ. ಮೇ. 7 ರಂದು ಬಿಜೆಪಿ ಬೆಂಬಲಿಸಿ. ಉತ್ತರ ಕನ್ನಡ ಎತ್ತರಕ್ಕೆ ಒಯ್ಯುತ್ತೇವೆ ಎಂದರು.ಹಿಂದಿನ ಅವಧಿಯ ಅಭಿವೃದ್ಧಿ ಕೆಲಸ ಯಾಕೆ ಹೇಳಿಲ್ಲ ಎಂಬ ಪ್ರಶ್ನೆಗೆ ಅಭಿವೃದ್ಧಿ ಏನಾಗಿದೆ ಎಂದು  ಪ್ರತ್ಯೇಕವಾಗಿ ಹೇಳುವೆವು ಎಂದರು .ರಾಜ್ಯ ಸರ್ಕಾರದ ಸಹಕಾರದಿಂದ ಕುಡಿಯುವ ನೀರಿಗಾಗಿ ಕಿರು ಅಣೆಕಟ್ಟು ನಿರ್ಮಿಸುತ್ತೇವೆ . ಕೃಷಿ ಗೆ ಪೂರಕ ಅಣೆಕಟ್ಟು ಸಹ ಮಾಡುವೆವು. ಅಂಕೋಲಾ - ಹುಬ್ಬಳ್ಳಿ ರೈಲ್ವೆ ಮಾರ್ಗ ಅನುಷ್ಠಾನ ಅಂತಿಮ ಹಂತದಲ್ಲಿ ಇದೆ. ಅದನ್ನು ಮಾಡೇ ಮಾಡ್ತೇವೆ. ಬಿಜೆಪಿ ಅಭಿವೃದ್ಧಿ ಪರ ಎಂದು ರವಿ ಹೆಗಡೆ ಹೇಳಿದರು. ಪರಿಸರಕ್ಕೆ ಕಡಿಮೆ ಹಾನಿಯಾಗುವ ಯೋಜನೆಗಳನ್ನು ಅನುಷ್ಠಾನ ಮಾಡಿಯೇ ಮಾಡ್ತೇವೆ. ಎಲ್ಲಾ ಯೋಜನೆಗಳನ್ನು  ಪರಿಸರ ರಕ್ಷಣೆಯ ಹೆಸರಲ್ಲಿ ಕೈ ಬಿಡಲ್ಲ ಎಂದರು. ಸಣ್ಣ ಸಣ್ಣ ಟೌನ್ ಶಿಪ್ ನಿರ್ಮಿಸುತ್ತೇವೆ ಎಂದರು.ಸಣ್ಣ ಪಟ್ಟಣಗಳಲ್ಲಿ ವೆಹಿಕಲ್ ಪಾರ್ಕಿಂಗ್ ಗೆ ಸ್ಥಳ ಇಲ್ಲದಂತಾಗಿದೆ. ಸ್ಮಾರ್ಟ ಸಿಟಿ ಕಲ್ಪನೆಯಲ್ಲಿ ತಾಲೂಕಾ ಕೇಂದ್ರಗಳ ಅಭಿವೃದ್ಧಿ ಮಾಡಲಾಗುವುದು.  

ಮೀನುಗಾರಿಕೆ ಆಧುನೀಕರಣ ಮಾಡಲಾಗುವುದು ಎಂದರು.ಸಾಗರ ಮಾಲಾದಲ್ಲಿ ಬಂದರುಗಳ ಅಭಿವೃದ್ಧಿ ಮಾಡುತ್ತೇವೆ ಎಂದರು. ಯೋಜನೆಗಳನ್ನು ಕೈ ಬಿಡಲ್ಲ ಎಂದರು. ಕೋಲ್ಡ್‌ ಸ್ಟೋರೇಜ್ ನಿರ್ಮಾಣ ಮಾಡುವೆವು .ಹಿಂದಿನ ಸಂಸದರು ಜನರ ಕೈಗೆ ಸಿಗುತ್ತಿರಲಿಲ್ಲ. ಹಿಂದೆ ನೀಡಿದ  ಪ್ರಣಾಳಿಕೆ ಅನುಷ್ಠಾನದ ಬಗ್ಗೆ ಹೇಳುವವರಾರು ಎಂಬ ಪ್ರಶ್ನೆಗೆ ಎರಡು ದಿನಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆ ರೂವಾರಿ  ರವಿ ಹೆಗಡೆ ಹೂವಿನಮನೆ ಹೇಳಿದರು. ಅಂಜಲಿ ನಿಂಬಾಳ್ಕರ್ ಶಾಸಕರಾಗಿ  ಒಂದೇ ಅವಧಿಯಲ್ಲಿ ಕೆಲಸ ಮಾಡಿದ್ದರೆ, ಖಾನಾಪುರದಲ್ಲಿ ಯಾಕೆ ಸೋತರು ಎಂದು ರವಿ ಹೆಗಡೆ ಪ್ರಶ್ನಿಸಿದರು .ರಾಷ್ಟ್ರೀಯ ಕಲ್ಪನೆ ಅವರಿಗೆ ಕಡಿಮೆಯಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವರು, ನಮ್ಮ ಕಾರ್ಯಕರ್ತರ ಜೊತೆ ಹಿಂದುತ್ವದ ಬಗ್ಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. 

ಪ್ರಜಾಪ್ರಭುತ್ವದ ಲಕ್ಷಣವೇ ಚರ್ಚೆ. ಅದಕ್ಕೆ ನಾವು ಸಿದ್ಧ ಎಂದರು .ಸಚಿವ ವೈದ್ಯ  ಅಧಿಕಾರದಲ್ಲಿದ್ದಾರೆ. ಚೆನ್ನಾಗಿ ಕೆಲಸ ಮಾಡಲಿ ಎಂದರು. ಹಿಂದೆ 30 ವರ್ಷ  ಸಚಿವರಾದವರು ಜಿಲ್ಲೆಯ ಅಭಿವೃದ್ಧಿ ಮಾಡಿದರಾ ಎಂದು ಪ್ರಶ್ನಿಸಿದರು.  ಹಿಂದೆ ಅಧಿಕಾರದಲ್ಲಿದ್ದವರಯ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲಿಲ್ಲ ಎಂದು ರವಿ ಹೆಗಡೆ ಹೇಳಿದರು.ರಾಷ್ಟ್ರ ಮಟ್ಟದಲ್ಲಿ ಭೌಗೋಳಿಕವಾಗಿ ಭಿನ್ನ ಕ್ಷೇತ್ರ. ಇಲ್ಲಿ ಮಿಕ್ಸಾಗಿರುವ ಜಾತಿಗಳು ಹೆಚ್ಚು. ಹಾಗಾಗಿ ಎಲ್ಲರನ್ನು ಜೊತೆಯಾಗಿಸಿಕೊಂಡು  ಹೋಗುವವರು ಲೋಕಸಭೆಗೆ ಹೋಗಬೇಕು . ಬ್ರಾಹ್ಮಣರು ಸೇರಿ ಕಾಗೇರಿಯನ್ನು ಆರಿಸುವ  ಎಂಬ ಹಾಡು ವೈರಲ್ ಆಗಿದೆಯಲ್ಲಾ, ಬಿಜೆಪಿ ಕಾರ್ಯಕರ್ತರು ಇದನ್ನು ವೈರಲ್ ಮಾಡುತ್ತಿದ್ದರಲ್ಲಾ ಎಂಬ ಪ್ರಶ್ನೆಗೆ ಇದು ಕಾಂಗ್ರೆಸ್ ನಲ್ಲಿರುವ ಬ್ರಾಹ್ಮಣರ ಕೈವಾಡ ಇರಬಹುದು ಎಂದು ರವಿ ಹೆಗಡೆ  ಹೂವಿನಮನೆ ಹೇಳಿದರು .ಸುಭಾಷ್ ಗುನಗಿ, ಕಿಶನ್ ಕಾಂಬಳೆ, ಮನೋಜ ಭಟ್ಟ, ನಾಗೇಶ್ ಕುರಡೇಕರ್ ಉಪಸ್ಥಿತರಿದ್ದರು.