ಯರಗಟ್ಟಿ

ಯರಗಟ್ಟಿ ತಾಲೂಕು ಕೃಷಿ ಸಮಾಜ ಪದಾಧಿಕಾರಿಗಳ ಆಯ್ಕೆ

ಯರಗಟ್ಟಿ ತಾಲೂಕು ಕೃಷಿ ಸಮಾಜ ಪದಾಧಿಕಾರಿಗಳ ಆಯ್ಕೆ

ಯರಗಟ್ಟಿ 29 :  ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ಯರಗಟ್ಟಿ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಯರಗಟ್ಟಿ ರೈತರ ಸಂಪರ್ಕ ಕೇಂದ್ರದಲ್ಲಿ ಬುಧವಾರ ರಂದು ಆಯ್ಕೆ ಪ್ರಕ್ರಿಯೆ ನಡೆಯಿತು.  8 ನಿರ್ದೇಶಕರುಗಳ ಆಯ್ಕೆಯು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಯರಗಟ್ಟಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿನಾಯಕ ಪಾಟೀಲ ಉಪಾಧ್ಯಕ್ಷರಾಗಿ ಶಿವನಗೌಡ ನಾಯ್ಕರ, ಪ್ರಧಾನ ಕಾರ್ಯದರ್ಶಿಯಾಗಿ ಸೋಮಪ್ಪ ಕಳ್ಳಿಗುದ್ದಿ, ಖಜಾಂಚಿಯಾಗಿ ಅನಸೂಯಾ ಪೋಳ, ಜಿಲ್ಲಾ ಪ್ರತಿನಿಧಿಯಾಗಿ ಗುರುಬಸಯ್ಯ ಪೂಜೇರ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಯಲ್ಲಪ್ಪಗೌಡ ಪಾಟೀಲ, ಸೋಮಯ್ಯ ಯಡಹಳ್ಳಿ, ಐ. ಎಫ್‌. ಸಿದ್ದರಡ್ಡಿ ಆಯ್ಕೆಯಾದರು. ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.ಈ ವೇಳೆ ಕೃಷಿ ಇಲಾಖೆ ಅಧಿಕಾರಿಗಳಾದ ಎಂ. ಜಿ. ಕಳಸಪ್ಪನ್ನವರ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿಗಳಾದ ಶ್ರವಣ ಶಿವಪೂಜಿ, ಮಹಾಂತೇಶ ಮಾಗುಂಡನ್ನವರ, ಮಂಜು ಮುಂಡೇಶಿ, ಹನಮಂತ ತಳವಾರ, ಪ. ಪಂ. ಸದಸ್ಯ ನಿಖಿಲ ಪಾಟೀಲ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಆರ್‌. ಕೆ. ಪಟಾತ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ