ಸಿಂದಗಿಯಲ್ಲಿ ಈದ್ ಮಿಲಾದ್ ಆಚರಣೆ

ಸಿಂದಗಿಯಲ್ಲಿ ಈದ್ ಮಿಲಾದ್ ಆಚರಣೆ Eid Milad celebrations in Sindagi

ಲೋಕದರ್ಶನ ವರದಿ 

ಸಿಂದಗಿ 26 : ಜಗತ್ತಿನ ಒಬ್ಬ ಮಹಾ ತತ್ವಜ್ಞಾನಿ ಮಹ್ಮದ ಪೈಗಂಬರರು ಜನ್ಮತಾಳಿದ ದಿನವನ್ನು  ಅವರ ಸವಿನೆಪಿಗಾಗಿ ಇಡೀ ದೇಶದಲ್ಲಿ ಈದ್ ಮಿಲಾದವನ್ನು ಅಷ್ಠೆ ಅಭಿಮಾನ ಮತ್ತು ಸಂಭ್ರಮದಿಂದ ಆಚರಿಲಾಗುತ್ತಿದೆ ಮಹ್ಮದ ಪೈಗಂಬರ ಅವರು ಮುಸ್ಲೀಂ ಧರ್ಮದಲ್ಲಿ ಹುಟ್ಟಿದರು ಕೂಡಾ ಮಾನವ ಕುಲಕ್ಕೆ ಕೊಟ್ಟ ಸಂದೇಶವನ್ನು ನಾವೆಲ್ಲರೂ ಸ್ಮರಣೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ಪಟ್ಟಣದ ತೆಕ್ಕಿಯಾ ಗಲ್ಲಿಯಲ್ಲಿ ಪುರಸಭೆ ಮಾಜಿ ಉಪಾದ್ಯಕ್ಷ ಹಾಸೀಂ ಆಳಂದ ನೇತೃತ್ವದಲ್ಲಿ ಹಮ್ಮಿಕೊಂಡ ಈದ್ ಮಿಲಾದ ನಿಮಿತ್ಯ ಸುರುಕುಂಭ ಮಕ್ಕಳೀಗೆ ಪುಸ್ತಕ ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಸ್ಮಾಂ ಧರ್ಮವೆಂದರೆ ನಿನ್ನೆ ಮೊನ್ನೆ ಹುಟಿದ ಧರ್ಮವಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಧರ್ಮವಾಗಿದೆ. ನಾವು ತಾಳ್ಮೆಯಿಂದ ಇರಬೇಕು

ಅಷ್ಟೇ ದಾನ ಧರ್ಮ ಪರೋಪಕಾರ ಕಾರ್ಯದಲ್ಲಿ ತೊಡಗಬೇಕು ದಿನನಿತ್ಯ ಮಹಾನಕುಲಕ್ಕೆ ಹೋರಾಟ ನಡೆಸಬೇಕು ಎಂದು ಮಹ್ಮದ ಪೈಗಂಬರ ಅವರು ಹೇಳಿದ ಸಂದೇಶದಲ್ಲಿ ಇಡೀ ಜೀವನುದ್ದಕ್ಕೂ ನೀಡಿದ ಆಚಾರ ವಿಚಾರಗಳನ್ನು ಕೊಡುಗೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಅವರು ನಡೆದುಹೋದ ದಾರಿಯಲ್ಲಿ ನಡೆಬೇಕು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ ಕರೇಪ್ಪ ಬೆಳ್ಳಿ, ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ,

ಅಂಜುಮನ್ ಶಿಕ್ಷಣ ಸಂಸ್ಥೆಯ ಅದ್ಯಕ್ಷ ರಜಾಕ ದುದ್ದನಿ, ಮಹ್ಮದಪಟೇಲ ಬಿರಾದಾರ, ಸತೀಶಗೌಡ ಬಿರಾದಾರ, ಇಸ್ಮಾಯಿಲ್ ಆಳಂದ, ಹಾಸೀಂ ಆಳಂದ, ಅಹ್ಮದ ಸಿಂಧೆ, ಹುಸೇನಿ ಗುಂದಗಿ, ರಜಾಕ ಮುಜಾವರ, ದಸ್ತಗೀರ ಪರಾಸ, ರಫೀಕ ಆಳಂದ, ರಜಾಕ ಕೊಳಕೂರ, ಅಮೀನ ವಾಲೀಕಾರ, ಮಹಿಬೂಬ ಆಳಂದ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು. ರಜಾಕ ಮುಜಾವರ ಸ್ವಾಗತಿಸಿ ನಿರೂಪಿಸಿದರು.