ಲಕ್ಷ್ಮೇಶ್ವರದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮ

ಲಕ್ಷ್ಮೇಶ್ವರದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮ Eid Milad celebrations in Lakshmeshwar


ಲಕ್ಷ್ಮೇಶ್ವರ  26: ಪಟ್ಟಣದಲ್ಲಿ ಈದ್ ಮಿಲಾದ್ ಮಹಮ್ಮದ್ ಪೈಗಂಬರರ 1501 ಜನ್ಮದಿನವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿ ಸಡಗರ ಸಂಭ್ರಮದೊಂದಿಗೆ ಆಚರಿಸಿದರು ಹಬ್ಬದ ಅಂಗವಾಗಿ ಸಮಸ್ತ ಮುಸ್ಲಿಂ ಬಾಂಧವರ ಮೆರವಣಿಗೆ ನಡೆಯಿತು ಮೆರವಣಿಗೆಯು ಪಟ್ಟಣದ ದೂದ್ ನಾನಾ ದರ್ಗಾದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಮಹಮ್ಮದ್ ಪೈಗಂಬರರ ಸಂದೇಶವನ್ನು ಸಾರುತ್ತಾ ಸಾಗಿತು ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಮುದ್ದು ಮಕ್ಕಳು ಯುವಕರು ಗುರುಹಿರಿಯರು ಪಾಲ್ಗೊಂಡಿದ್ದರು ಮೆರವಣಿಗೆಯ ಉದ್ದಕ್ಕೂ ಮುಸ್ಲಿಂ ಸಮುದಾಯದ ಹೋಟೆಲ್ ಗ್ಯಾರೇಜ್‌ಗಳಲ್ಲಿ ಲಸ್ಸಿ ಬಾದಾಮಿ ಹಾಲು ವಿತರಿಸಿರುವುದು ವಿಶೇಷವಾಗಿತ್ತು. 

 ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾಂ ಉರ್ದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ರಿಯಾಜ್ ಅಹ್ಮದ್ ಗದಗ ಅವರು ಮಾತನಾಡಿ ಮಹಮ್ಮದ್ ಪೈಗಂಬರರು ಸಾರಿದ ಏಕದೇವೋ ಪಾಸನೆ ಮಾನವೀಯತೆ ಸಮಾನತೆ ಸತ್ಪಡೆಗಳ ಬೋಧನೆಗಳಾಗಿವೆ ಅಲ್ಲಾಹನು ದದೇವರುನ ಒಬ್ಬನೇ ಆತನಿಗೆ ಯಾರು ಪಾಲುದಾರರಿಲ್ಲಾ ಎಲ್ಲರೂ ಆತನೊಬ್ಬನಿಗೆ ಶರಣಾಗಬೇಕು ಜಾತಿ ವರಣ ಕುಲ ಭಾಷೆ ಮೇಲೆ ಯಾರು ಶ್ರೇಷ್ಠರಲ್ಲ ಧರ್ಮನಿಷ್ಠತೆಗೆ ಮಾನದಂಡ ನ್ಯಾಯ ಎಲ್ಲರಿಗೂ ಸಮಾನ ದೌರ್ಜನ್ಯ ಮತ್ತು ಅನ್ಯಾಯವನ್ನು ವಿರೋಧಿಸಬೇಕು ಸದಾಚಾರ ಮತ್ತು ಒಳ್ಳೆಯ ನಡವಳಿಕೆ ಸತ್ಯಸಂಧತೆ ಪ್ರಮಾಣಿಕತೆ ಹಿರಿಯರನ್ನು ಗೌರವಿಸುವುದು.

ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುವುದು ಶಾಂತಿ ಮತ್ತು ಸಹಬಾಳ್ವೆ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಇತರರೊಂದಿಗೆ ಸಹಾನುಭೂತಿಯಿಂದ ನಡೆದುಕೊಳ್ಳುವುದು ಮಹಮದ್ ಪೈಗಂಬರರ ಸಂದೇಶವಾಗಿದೆ ಎಂದರು ಮೆರವಣಿಗೆಯಲ್ಲಿ ಕಲಾಂ ಶಾಲೆಯ ಹಾಶಂಪೀರ ಕಣಕೆ ಗುಡುಸಾಬ ಗುಡಿಗೇರಿ ಬಶೀರ ಅಹ್ಮದ್ ಚೌರಿ ಮಹ್ಮದ ಹುಸೇನ್ ಬಂಕಾಪುರ ಅಬ್ದುಲ್ ರಶೀದ್ ಬಳ್ಳಾರಿ ಇಂತಿಮಿಯಾಜ್ ಅಹ್ಮದ್ ಬಂಕಾಪುರ ಆಸ್ಪಾಕ್ ಅಹ್ಮದ್ ಬಂಕಾಪುರ ಮಹ್ಮದ ಅಲಿ ಕಣಿಕೆ ಹಾಶಂ ಹುಸೇನ್ ಗುತ್ತಲ್ ಸುರೇಶ್ ನಂದೆಣ್ಣವರ ಅಕ್ಬರ್ ಸೇರಿದಂತೆ ಸಮಸ್ತ ಮುಸ್ಲಿಂ ಸಮುದಾಯದ ಗುರುಹಿರಿಯರು ಯುವಕರು ಮುದ್ದು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು