ಪಿನಿಕ್ಸ್ ಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಅಚರಣೆ ಪ್ರಾತ್ಯಕ್ಷಿಕೆ
Eco-friendly Diwali celebration demonstration at Phoenix School
ಪಿನಿಕ್ಸ್ ಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಅಚರಣೆ ಪ್ರಾತ್ಯಕ್ಷಿಕೆ
ಶಿಗ್ಗಾವಿ 18 : ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಮಾಲಿನ್ಯ ಮುಕ್ತ ದೀಪಾವಳಿ ಆಚರಣೆ ಮಾಡೋಣ ಎಂದು ಶಿಕ್ಷಕಿ ಸೌಮ್ಯಾ ಹೇಳಿದರು. ಪಟ್ಟಣದ ಪ್ರತಿಷ್ಠಿತ ಪಿನಿಕ್ಸ್ ಇಂಟರ್ನ್ಯಾಷನಲ್ ಸಮೂಹ ಸಂಸ್ಥೆಯ ಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಪ್ರಾತ್ಯಕ್ಷಿಕೆ ಮಾಡಿ ತೋರಿಸಿ ಮಾತನಾಡಿದ ಅವರು ವರ್ಣರಂಜಿತ ಹಬ್ಬ ದೀಪಾವಳಿ ಬಂದಿದೆ. ದೇಶ ಒಂದೇ ಆದರೂ ನೂರು ವಿಭಿನ್ನ ಸಂಸ್ಕೃತಿಗಳು ನೆಲೆಗೊಂಡಿರುವ ಭಾರತದ ಯಾವುದೇ ಮೂಲೆಗೆ ಹೋದರೂ ದೀಪಾವಳಿ ವೈಭವ ಕಾಣಸಿಗುತ್ತದೆ. ಆದರೆ ಅದನ್ನು ಕರೆಯುವ, ಆಚರಿಸುವ ವಿಧಾನಗಳು ಮಾತ್ರ ತುಸು ಭಿನ್ನ. ಸಂಭ್ರಮ ಮಾತ್ರ ನಿತ್ಯನೂತನ. ಹಣತೆ ಬೆಳಗಿಸಿ. ಮಾಲಿನ್ಯ ತಡೆಯಿರಿ, ಮಾಲಿನ್ಯಕಾರಿ ಪಟಾಕಿ ತ್ಯಜಿಸಿ, ಹಸಿರು ಪಟಾಕಿ ಬಳಸಿ, ಮಾಲಿನ್ಯ ಮುಕ್ತ ದೀಪಾವಳಿ ಆಚರಿಸಿ, ಹಸಿರು ದೀಪಾವಳಿ ಪರಿಸರ ದೀಪಾವಳಿ ಆಚರಿಸೋಣ ಎಂದರು.ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶೀರೀನ್, ಆಸ್ಮಾ, ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 