ಲಾರಿ ಹರಿದು ಚಾಲಕ ಸಾವು
ಕಾರವಾರ 26 : ಅಂಕೋಲಾ ತಾಲೂಕಿನ ಬೋಗ್ರಿಬೈಲ್ನ ಕಲ್ಲು ಕ್ರಶರ್ನಲ್ಲಿ ನಿಲ್ಲಿಸಿದ್ದ ಲಾರಿ ಚಲಿಸಿ ಚಾಲಕನ ಮೇಲೆಯೇ ಹರಿದ ಪರಿಣಾಮ ಹಟ್ಟಿಕೇರಿಯ ಮಾರುತಿ ರಾಮಚಂದ್ರ ನಾಯ್ಕ ಮೃತಪಟ್ಟಿದ್ದಾರೆ. ಕಲ್ಲುಗಳನ್ನು ಅನ್ಲೋಡ್ ಮಾಡಲು ಲಾರಿಯಿಂದ ಕೆಳಗಿಳಿದಿದ್ದ ವೇಳೆ ಹ್ಯಾಂಡ್ಬ್ರೇಕ್ ಸರಿಯಾಗಿ ಬೀಳದ ಕಾರಣ ಭಾರೀ ವಾಹನ ಏಕಾಏಕಿ ಚಲಿಸಿದೆ. ಲಾರಿಯನ್ನು ತಡೆಯಲು ಯತ್ನಿಸಿದ ಮಾರುತಿ ನಾಯ್ಕ ಚಕ್ರಗಳಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.