ಕವಿ ಗೋಷ್ಠಿಯಲ್ಲಿ ಡಾ. ಶೇಖರಗೌಡ ಮಾಲಿಪಾಟೀಲರಿಗೆ ಸನ್ಮಾನ

ಕವಿ ಗೋಷ್ಠಿಯಲ್ಲಿ ಡಾ. ಶೇಖರಗೌಡ ಮಾಲಿಪಾಟೀಲರಿಗೆ ಸನ್ಮಾನ  Dr. Shekharagouda Malipatil felicitated at the poets' meet

ಲೋಕದರ್ಶನ ವರದಿ  

ಕೊಪ್ಪಳ 27: ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಭಾನುವಾರ ನಡೆದ 14ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ನಾಲ್ಕನೇ ಗೋಷ್ಠಿಯಾಗಿ ಆಯೋಜಿಸಿದ್ದ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರಾದ ಡಾ. ಶೇಖರಗೌಡ ಮಾಲಿಪಾಟೀಲ ಅವರನ್ನು ಸಿರಿಗನ್ನಡ ವೇದಿಕೆ ರಾಜ್ಯ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್‌. ಗೋನಾಳ, ಲೇಖಕಿ ಶ್ರೀಮತಿ ಅರುಣಾ ನರೇಂದ್ರ, ಡಾ. ನಾಗರಾಜ ದಂಡೋತಿ, ಪ್ರೊ. ಶರಣಬಸಪ್ಪ ಬಿಳಿಎಲೆ, ನಾಟಕ ರಚನಾಕಾರ ವೈ.ಎಚ್‌. ಹಳ್ಳಿಕೇರಿ, ನಾಟಕ ನಿರ್ದೇಶಕ ದೇವರಾಜ ಹಲಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.