ಒತ್ತಡ ನಿರ್ವಹಣೆ ಉಪನ್ಯಾಸ ನೀಡಿದ ಡಾ. ನಿಶಾ ಹಳಿಂಗಳೆ

ಒತ್ತಡ ನಿರ್ವಹಣೆ ಉಪನ್ಯಾಸ ನೀಡಿದ ಡಾ. ನಿಶಾ ಹಳಿಂಗಳೆ Dr. Nisha Halingale delivered a lecture on stress management

ಕಾಗವಾಡ 26 : ಬದಲಾಗುತ್ತಿರುವ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡವು ಮಹಿಳೆಯರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಕಾಲಿಕ ರೋಗನಿರ್ಣಯ ಮತ್ತು ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಸ್ತ್ರೀರೋಗ ರೋಗಗಳನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಡಾ. ನಿಶಾ ಹಳಿಂಗೆಳೆ ತಿಳಿಸಿದ್ದಾರೆ. ಅವರು ಇತ್ತಿಚಿಗೆ ಮಹಾರಾಷ್ಟ್ರ ತಾಸಗಾಂವದ ತುರ್ಚಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಿರಜ್‌ನ ನಿರ್ಮಲ ಆಸ್ಪತ್ರೆಯ ಸಹಯೋಗದೊಂದಿಗೆ ಮಹಿಳಾ ಪೊಲೀಸ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳಿಗಾಗಿ ಮಹಿಳಾ ಆರೋಗ್ಯ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪ್ರಸ್ತುತ ಮಹಿಳೆಯರಲ್ಲಿ ಪಿಸಿಒಡಿ (ಪಾಲಿಸಿಸ್ಟಿಕ್ ಓವರಿ ಡೀಸೀಸ್) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇದರ ಬಗ್ಗೆ ಅರಿವು ಅಗತ್ಯ ಎಂದು ಹೇಳಿದರು. ನಿರ್ಮಲ್ ಆಸ್ಪತ್ರೆಯ ಡಾ. ಪ್ರಕಾಶಕುಮಾರ ಮೋರೆ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಮಾರ್ಗದರ್ಶನ ಮಾಡಿದರು. ಸಹಾಯಕ ಪೊಲೀಸ್ ನೀರೀಕ್ಷಕಿ ವೈಶಾಲಿ ಕೋರೆ ಸ್ವಾಗತಿಸಿ, ಪರಿಚಯಿಸಿ, ನಿರೂಪಿಸಿ, ವಂದಿಸಿದರು.  ಈ ವೇಳೆ ಪೊಲೀಸ ನೀರೀಕ್ಷಕಿಯರಾದ ವೈಶಾಲಿ ಕೋರೆ, ಕುಲಕರ್ಣಿ, ಜಗತಾಪ ಸೇರಿದಂತೆ ಇತರ ಪೋಲಿಸ್ ಸಿಬ್ಬಂದಿಗಳು, ತುರ್ಚಿ ಪೊಲೀಸ್ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು, ನಿರ್ಮಲ ಆಸ್ಪತ್ರಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.