ಡಾ. ಎನ್ ವಜ್ರಕುಮಾರ್ ಅವರ 87ನೇ ಜನ್ಮೋತ್ಸವ ‘ಡಾಕ್ಟರ್ ಏನ್ ವಜ್ರಕುಮಾರ್ ಅವರ ಶಿಕ್ಷಣ ಸೇವೆ ಅನನ್ಯ’

ಡಾ. ಎನ್ ವಜ್ರಕುಮಾರ್ ಅವರ 87ನೇ ಜನ್ಮೋತ್ಸವ ‘ಡಾಕ್ಟರ್ ಏನ್ ವಜ್ರಕುಮಾರ್ ಅವರ ಶಿಕ್ಷಣ ಸೇವೆ ಅನನ್ಯ’ Dr. N Vajrakumar's 87th birth anniversary 'Dr. N Vajrakumar's educational service is unique'

ಹುಬ್ಬಳ್ಳಿ ಧಾರವಾಡ 30: ಅವಳಿ ನಗರಗಳಿಗೆ ವಿದ್ಯಾಕಾಶಿ ಎಂಬ ಗಣತೆ ಗೌರವಗಳು ಬರುವಲ್ಲಿ ತಮ್ಮನ್ನು ತಾವೇ ಸಮರ​‍್ಿಸಿಕೊಂಡಿದ್ದರು.  ಜನತಾ ಶಿಕ್ಷಣ ಸಮಿತಿಯ ಕೀರ್ತಿಯನ್ನು ಗಗನದ ಎತ್ತರಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯರು ಹಾಗೂ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾಗಿದ್ದ ಡಾ. ಎನ್ ವಜ್ರಕುಮಾರ್ ಅವರ 87ನೇಯ ಜನ್ಮೋತ್ಸವ ಶುಕ್ರವಾರ ದಿ. 29ರಂದು ಬೆಳಗಾವಿಯ ಆಶಾಕಿರಣ ಬುದ್ಧಿ ವಿಕಲಚೇತನ ಮಕ್ಕಳ ವಿಶೇಷ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಯಿತು.  ಅವರ ಧರ್ಮಪತ್ನಿ ಸುಮನಾ ವಜ್ರಕುಮಾರ್ ಅವರು ಕೊಡ ಮಾಡಿದ ವಿಶೇಷ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಆಟಿಕೆಯ ಸಾಮಗ್ರಿಗಳನ್ನು  ವಿತರಿಸಲಾಯಿತು ಹಾಗೂ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಮಾರಂಭದಲ್ಲಿ ಅತಿಥಿಗಳಾಗಿ ಸ. ರಾ.ಸುಳಕೂಡೆ ನಿವೃತ್ತ ಉಪನಿರ್ದೇಶಕರು ಆರ್ಥಿಕ ಮತ್ತು ಸಾಂಕೀಕ ಇಲಾಖೆ ಇವರು ಭಾಗವಹಿಸಿ ಡಾ. ಎನ. ವಜ್ರಕುಮಾರ ರವರ ಶಿಕ್ಷಣ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು  ಗುಣಗಾನ ಮಾಡಿದರು. ಅವರ ಶಿಷ್ಯ ಡಿ.ಇ.ಎಸ್‌. ವಿಶ್ರಾಂತ ಉಪ ನಿರ್ದೇಶಕರಾದ ಆರ್‌. ಬಿ. ಬನಶಂಕರಿ ಅವರ ಅಧ್ಯಕ್ಷತೆಯಲ್ಲಿ ಈ ಸಮಾರಂಭವು ಜರುಗಿತು.ಈ ಸಂದರ್ಭದಲ್ಲಿ ಅವರು ಡಾಕ್ಟರ್ ಎನ್ ವಜ್ರ ಕುಮಾರ್ ಅವರ ಶೈಕ್ಷಣಿಕ ಸೇವೆ ಸೇವೆಯನ್ನು ಹಾಗೂ ದಾನ ಗುಣವನ್ನು ಸ್ಮರಿಸಿದರು, ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಮಾಳಗಿ, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಮಕ್ಕಳು ತಮ್ಮ ಆಟಗಾರಿಕೆ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.