ಡಾ. ಮಲ್ಲಿಕಾರ್ಜುನ ಮನಸೂರರ 34ನೇ ಪುಣ್ಯಸ್ಮರಣೆ

ಡಾ. ಮಲ್ಲಿಕಾರ್ಜುನ ಮನಸೂರರ 34ನೇ ಪುಣ್ಯಸ್ಮರಣೆ  Dr. Mallikarjun Mansur's 34th Death Anniversary

ಡಾ. ಮಲ್ಲಿಕಾರ್ಜುನ ಮನಸೂರರ 34ನೇ ಪುಣ್ಯಸ್ಮರಣೆ  

ಧಾರವಾಡ  143ಳ: ಸರಳತೆ, ಶಿಸ್ತು ಹಾಗೂ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರು ಸಂಗೀತ ಕ್ಷೇತ್ರದ ಸಿದ್ಧಪುರುಷರಾಗಿದ್ದರು ಎಂದು ಹಿರಿಯ ಸಂಗೀತ ಕಲಾವಿದ ಪಂ. ರಾಚಯ್ಯ ಹಿರೇಮಠ ಹೇಳಿದರು.  ನಗರದ ಕರ್ನಾಟಕ ಕುಲಪುರೋಹಿತ ಆಳೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಡಾ. ಮಲ್ಲಿಕಾರ್ಜುನ ಮನಸೂರರ 34ನೇ ಪುಣ್ಯಸ್ಮರಣೆ ಹಾಗೂ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಯುವ ಕಲಾವಿದರು ಹಿರಿಯ ಸಂಗೀತ ದಿಗ್ಗಜರ ಆದರ್ಶಗಳನ್ನು ಅಳವಡಿಸಿಕೊಂಡು ಸಂಗೀತ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದ ಅವರು, ಮನಸೂರ ಅವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.  ಅಕ್ಕಮಹಾದೇವಿ ಆಳೂರು ವಚನ ಸಂಗೀತ, ಡಾ. ಮಿಥುನ್ ಚಕ್ರವರ್ತಿ ಶಾಸ್ತ್ರೀಯ ಸಂಗೀತ, ಅಂಕುಶ ನಾಯಕ್ ಸಿತಾರ್ ವಾದನ ಹಾಗೂ ಅರ್ಣವ್ ಬುವಾ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು.  ಟ್ರಸ್ಟ್‌ ಕಾರ್ಯದರ್ಶಿ ಕುಮಾರ್ ಬೆಕ್ಕೆರಿ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿ, ವಂದಿಸಿದರು. ಟ್ರಸ್ಟ್‌ ಸದಸ್ಯರಾದ ಪಂ. ಬಿ.ಎಸ್‌. ಮಠ, ಡಾ. ಶಾಂತರಾಮ ಹೆಗಡೆ ಸೇರಿದಂತೆ ಸಂಗೀತ ಕಲಾವಿದರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.