ಲಕ್ಷ್ಮೇಶ್ವರದಲ್ಲಿ ಅದ್ದೂರಿ ಗಣೇಶ ಮೂರ್ತಿ ಬರಮಾಡಿಕೊಂಡ ಭಕ್ತರು

ಲಕ್ಷ್ಮೇಶ್ವರದಲ್ಲಿ ಅದ್ದೂರಿ ಗಣೇಶ ಮೂರ್ತಿ ಬರಮಾಡಿಕೊಂಡ ಭಕ್ತರು Devotees in Lakshmeshwar welcomed the grand Ganesha idol.

ಲಕ್ಷ್ಮೇಶ್ವರದಲ್ಲಿ ಅದ್ದೂರಿ ಗಣೇಶ ಮೂರ್ತಿ ಬರಮಾಡಿಕೊಂಡ ಭಕ್ತರು  

ಲಕ್ಷ್ಮೇಶ್ವರ, ಸೆ.13: ಪಟ್ಟಣದ ಸೊಪ್ಪಿನಕೇರಿ ಓಣಿಯಲ್ಲಿರುವ ಚಳ್ಳಮರದ ಓಣಿಯಲ್ಲಿ ಪ್ರತಿಷ್ಠಾಪನೆಗಾಗಿ ಆಗಮಿಸಿದ ಲಕ್ಷ್ಮೇಶ್ವರ ಕಾ ರಾಜಾ ಗಣಪತಿ ಮೂರ್ತಿಯನ್ನು ಭಕ್ತರು, ಯುವಕರು ಹಾಗೂ ಮಹಿಳೆಯರು ಅದ್ದೂರಿಯಾಗಿ ಬರಮಾಡಿಕೊಂಡರು.  ಪಟ್ಟಣದ ಭಾನು ಮಾರ್ಕೆಟ್ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಬೆಳಗಿ ಗಣೇಶ ಮೂರ್ತಿಯನ್ನು ಬರಮಾಡಿಕೊಂಡರು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.  ಗಣೇಶ ಮೂರ್ತಿಯ ಆಗಮನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೆರವಣಿಗೆ ಸುಗಮವಾಗಿ ಸಾಗಲು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.