ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿ ಆಚರಣೆ

Dr. BR Ambedkar Jayanti celebration- Belagavi

ಸಂಬರಗಿ 23: ಜಂಬಗಿ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿ, ಭಾವಚಿತ್ರ ಪೂಜೆ, ಹಿರಿಯ ಪತ್ರಕರ್ತ ಬಾಪು ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ವಿನಾಯಕ ಪಾಟೀಲ ಇವರಿಂದ ಭಾವಚಿತ್ರ ಪೂಜೆಯನ್ನು ನೆರವೇರಿಸಿದರು.  

ಹಿರಿಯ ಪತ್ರಕರ್ತರಾದ ಬಾಪು ಪಾಟೀಲ ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ನಂತರ ನಾವು ಜವಾಬ್ದಾರಿ ಮುಕ್ತವಾದೆಂದು ಅಲ್ಲ, ಅವರ ಆಚಾರ ವಿಚಾರಗಳನ್ನು ಜನ ಸಾಮಾನ್ಯರಿಗೆ ತಿಳಿಸಿ ಅಂತಹ ಪೀಳಿಗೆ ನಿರ್ಮಾಣ ಆಗಬೇಕು ಎಂದು ಹೇಳಿದರು. 

ಮಾಜಿ ಯೋಧ ಸುಖದೇವ ವಾಘಮಾರೆ, ಯಶವಂತ ಧರೆಕರ, ಸಚೀನ ವಾಘಮಾರೆ, ವಸಂತ ವಾಘಮಾರೆ, ರಾಹುಲ ಸುಖದೇವ ವಾಘಮಾರೆ, ಘೋರಕ ವಾಘಮಾರೆ, ಪೋಪಟ ವಾಘಮಾರೆ, ಸದಾಶಿವ ವಾಘಮಾರೆ, ಅಣ್ಣಪ್ಪ ವಾಘಮಾರೆ ಇನ್ನಿತರರು ಉಪಸ್ಥಿತರಿದ್ದರು.