ಆಮೀಷಕ್ಕೆ ಒಳಗಾಗಿ ಮಾರಾಟ ಜಾಲದಲ್ಲಿ ಸಿಲುಕದಿರಿ

 ಆಮೀಷಕ್ಕೆ ಒಳಗಾಗಿ ಮಾರಾಟ ಜಾಲದಲ್ಲಿ ಸಿಲುಕದಿರಿ Do not fall prey to inducements and get trapped in a sales network

ಲೋಕದರ್ಶನ ವರದಿ 

ಗುರ್ಲಾಪುರ 02 :  ಗ್ರಾಮದಲಿ  ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ   ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿ.ಸಿ ಟ್ರಸ್ಟ್‌  ಮೂಡಲಗಿ ಇವರ ಸಹಯೋಗದಲ್ಲಿ ಮಾನವ ಕಳ್ಳ ಸಾಗಣೆ   ವಿರೋಧಿ ದಿನ ದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಆ ಯೋಜನೆ ಮಾಡಲಾಗಿತ್ತು.  ಸದರಿ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶರಾದ   ಸವಿತಾ ನಿಂಗಪ್ಪ ಮುಕ್ಕಲ್ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ    ಆಮೀಷಕ್ಕೆ ಒಳಗಾಗಿ ಮಾರಾಟ ಜಾಲದಲ್ಲಿ ಸಿಲುಕದಿರಿ  ಎಂದು ವಿವರಿಸಿದರು.

ನಂತರದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರನ್ನು ಉದ್ದೇಶಿಸಿ ಮಹಿಳೆಯರು ಹಾಗೂ ಮಕ್ಕಳು ಕೆಲಸ ಅಥವಾ ಯಾವುದೇ ಆಮಿಷಕ್ಕೆ ಒಳಗಾಗಿ  ಅವರಿಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆ  ಮಾರಾಟ ಜಾಲದಲ್ಲಿ ಸಿಲುಕುತ್ತಿದ್ದಾರೆ, ಇದಕ್ಕೆ ವಿದ್ಯಾವಂತರು ಹೊರತಾಗಿಲ್ಲ. ಯಾವುದೇ ಸಂಕಷ್ಟ ಬಂದರೂ ಕಾನೂನು ಅವರ ಸಹಾಯಕ್ಕೆ ಇದೆ ಎಂದು ಮರೆಯಬಾರದು.   ಕಾನೂನನ್ನು  ಆಸ್ತಿ ಹಂಚಿಕೆ ಬಂದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ ಆದರೆ, ಸಮಸ್ಯೆ ಬಂದಾಗ ಕಾನೂನಿನ ನೆರವನ್ನು ಪಡೆಯದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇವರ ಸಹಾಯಕ್ಕೆ ಪ್ರತಿ ತಾಲೂಕಿನಲ್ಲಿ ಕಾನೂನು ಸೇವೆಗಳ ಸಮಿತಿ ರಚನೆಯಾಗಿದೆ. ಖಂಡಿತ ನ್ಯಾಯ ದೊರಕುತ್ತದೆ. ಕಾನೂನಿಗೆ ಪ್ರತಿಯೊಬ್ಬರು ತಲೆಬಾಗಲೇಬೇಕು ಎಂದು ವಿವರಿಸಿದರು.  

ಕಾರ್ಯಕ್ರಮದ ಪ್ರಾಸ್ತಾವಿಕತೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಥಣಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ    ಲೀಲಾವತಿ ಇವರು ಮಹಿಳೆಯರಿಗೆ ಜಾಗೃತಿ ಮತ್ತು ಅರಿವನ್ನು ಮೂಡಿಸಲು ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಶ್ರಮಿಸುತ್ತಿದೆ.  ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಲ್ಲಿ ಮಾಹಿತಿ ಕಾರ್ಯಕ್ರಮಗಳು, ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು, ಶಿಬಿರಗಳು  ಹೀಗೆ ಹಲವಾರು  ವಿಧದಲ್ಲಿ  ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿಗ್ರಾಮ ಮಟ್ಟದಲ್ಲಿ ಅನುಷ್ಠಾನಿಸುತ್ತಿದೆ ಎಂದು ಮಾತನಾಡಿದರು  ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಅನಿಲ್ ಎಸ್ ಕೌಜಲಗಿ ಇವರು  ಮಾನವ ಕಳ್ಳ ಸಾಗಣ ವಿರೋಧಿ ದಿನ ಆಚರಣೆಯ ಉದ್ದೇಶವನ್ನು ವಿವರಿಸಿದರು.  

ಕಾರ್ಯಕ್ರಮದಲ್ಲಿ, ಗುರ್ಲಾಪುರ ಗ್ರಾಮದ  ಅಶೋಕ್ ಗಾಣಿಗೇರ್,   ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ  ಆರ್ ಆರ್ ಬಾಗೋಜಿ , ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಶ್ರೀಯುತ ಉದಯ ಗೌಡ, ನ್ಯಾಯವಾದಿ ಸಂಘದ ಪದಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಪೋಲಿಸ್ ಇಲಾಖೆ ಸಿಬ್ಬಂದಿಗಳು, ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಹಾಗೂ ಸ್ವಸಹಾಯ ಸಂಘದ ಮಹಿಳೆಯರು, ನವ ಜೀವನ ಸಮಿತಿಯ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.