ಸಾರ್ವಜನಿಕ ಸೇವೆ, ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ-್ಯ ವಹಿಸದಿರಿ: ನ್ಯಾ. ಫಣೀಂದ್ರ

ಸಾರ್ವಜನಿಕ ಸೇವೆ, ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ-್ಯ ವಹಿಸದಿರಿ: ನ್ಯಾ. ಫಣೀಂದ್ರ  Do not be negligent in public service and the discharge of duties: Justice Phanindra

ಲೋಕದರ್ಶನ ವರದಿ 

ಗದಗ 06: ಸರ್ಕಾರಿ ಕಚೇರಿಗಳ  ಮೇಲೆ ಬರೆದಿರುವ 'ಸರ್ಕಾರಿ ಕೆಲಸ ದೇವರ ಕೆಲಸ' ಎಂಬ ಸಾಲು ಬರೀ  ಫಲಕಕ್ಕೆ ಸೀಮಿತವಾಗಬಾರದು.  ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮತ್ತು ಅವರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸುವುದು ಪ್ರತಿಯೊಬ್ಬ  ನೌಕರನ ಆದ್ಯ ಕರ್ತವ್ಯವಾಗಿದೆ" ಎಂದು ಕರ್ನಾಟಕ ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾ. ಕೆ.ಎನ್‌.ಫಣೀಂದ್ರ ಅವರು  ಅಧಿಕಾರಿಗಳಿಗೆ ನೀತಿ ಪಾಠ ಹೇಳಿದರು. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಅಗಸ್ಟ 6) ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ದೂರುದಾರರು ಮತ್ತು ಎದುರುದಾರರುಗಳ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿರುವ ಸುಮಾರು 8 ಕೋಟಿ ಜನಸಂಖ್ಯೆಗೆ ಉತ್ತಮ ಜೀವನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಕೇವಲ ಶೇ. 1 ರಷ್ಟಿರುವ (ಸುಮಾರು 8 ರಿಂದ 9 ಲಕ್ಷ) ಸರ್ಕಾರಿ ಕಾರ್ಯಾಂಗದ ಮೇಲಿದೆ. ಈ ಜವಾಬ್ದಾರಿಯನ್ನು ನೌಕರರು ಅತ್ಯಂತ ಪ್ರೀತಿ ಮತ್ತು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.