ಜಿಲ್ಲಾ ಪಿ.ಸಿ ಮತ್ತು ಪಿ.ಪಿ.ಎನ್.ಡಿ.ಟಿ ಕಾಯ್ದೆ ಸಲಹಾ ಸಮಿತಿ ಸಭೆ:ಸ್ಕ್ಯಾನಿಂಗ್ ಸೆಂಟರ್ ಬಗ್ಗೆ ಬಂದ ದೂರುಗಳು
ಕಾರವಾರ 15: ಜಿಲ್ಲಾ ಪಿ.ಸಿ ಮತ್ತು ಪಿ.ಪಿ.ಎನ್.ಡಿ.ಟಿ. ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆಯು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ತಂಡದ ತಪಾಸಣೆ ಕುರಿತಂತೆ ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಣಾಮಕಾರಿ ಪರೀಶೀಲನೆ ಮಾಡಬೇಕೆಂದು ಡಿಎಚ್ ಓ ನೀರಸ್ ಸಮಿತಿ ಸದಸ್ಯರಿಗೆ ಸೂಚಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಾ. ನೀರಸ ನೂತನ ಜಿಲ್ಲಾ ಸಲಹಾ ಸಮಿತಿಯ ರಚನೆ ಸಂಬಂಧಿಸಿದಂತೆ ಸದಸ್ಯರ ಜೊತೆ ಚರ್ಚೆ ಮಾಡಿದರು ಹಾಗೂ ಹೊಸ ನೋಂದಣಿ ಮತ್ತು ನವೀಕರಣ ಕುರಿತಂತೆ ಸಲ್ಲಿಕೆಯಾದ ಅರ್ಜಿಗಳನ್ನು ಪರೀಶೀಲಿಸಿದರು.
ಹಾಗೂ ಜಿಲ್ಲೆಯ ಕೆಲ ಸ್ಕ್ಯಾನ್ ಸೆಂಟರ್ ಕುರಿತು ಬಂದಿರುವ ದೂರಿನ ಕುರಿತು ಚರ್ಚಿಸಿ ಸಲಹೆ ಪಡೆದರು. ಪಿ.ಸಿ.ಪಿ.ಎನ್.ಡಿ.ಟಿ ಸಕ್ಷಮ ಪ್ರಾಧಿಕಾರಿಗಳ ಅನುಮೋದನೆ ಕೋರಿದರು. ನಂತರ ಕಡತವನ್ನು ಜಿಲ್ಲಾಧಿಕಾರಿಗಳ ಬಳಿ ಮಂಡಿಸಲು ತೀರ್ಮಾನಿಸಲಾಯಿತು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಸಮಿತಿಯ ಸದಸ್ಯರಾದ ಡಾ. ಆಶ್ವಿನಿ, ಡಾ. ನಾಗರಾಜ್ ಭಟ್, ಡಾ, ಗಣೇಶ್ ಭಟ್, ಶ್ರೀಕಾಂತ ಮತ್ತಿತರರು.