ತ್ರೀ ಸ್ಟಾರ್ ಹೊಟೇಲ್ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಡಿಸಿ ಸೂಚನೆ
District Magistrate inspects the site of the three-star hotel construction
ತ್ರಿ ಸ್ಟಾರ್ ಹೊಟೇಲ್ ಕಟ್ಟಡ ಸ್ಥಳ ಪರೀಶೀಲಿಸಿದ ಜಿಲ್ಲಾಧಿಕಾರಿಗಳು
ವಿಜಯಪುರ 13: ನಗರ ಹೊರ ವಲಯದ ಭೂತನಾಳ ಕೆರೆ ಬಳಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ತ್ರಿ-ಸ್ಟಾರ್ ಹೊಟೇಲ್ ಕಟ್ಟಡಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿದರು.
2019ನೇ ಸಾಲಿನಲ್ಲಿ ರಾಜ್ಯಾದಂತ 04 ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ತ್ರೀ-ಸ್ಟಾರ್ ಹೊಟೇಲ್ ಮಂಜೂರಾಗಿವೆ. ಈ ಪೈಕಿ ನಗರದ ಹೊರವಲಯದ ಬೂತನಾಳ ಕೆರೆ ಪಕ್ಕದಲ್ಲಿ 5 ಎಕರೆ ಜಮೀನಿನಲ್ಲಿ ತ್ರೀ-ಸ್ಟಾರ್ ಹೋಟೆಲ್ ಕಟ್ಟಡವನ್ನು ಮೆ.ರೈಟ್ಸ್ ಸಂಸ್ಥೆಯ ಮೂಲಕ ಅಂದಾಜು ಮೊತ್ತ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರಸ್ತುತ ಅಂತಿಮ ಹಂತದಲ್ಲಿರುವ ಕಾಮಗಾರಿಯ ಕಂಪೌಂಡ ವಾಲ್ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲು ಸಂಬಂಧಪಟ್ಟ ಅನುಷ್ಠಾನ ಸಂಸ್ಥೆಗೆ ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ. ಅವರು ಸೂಚಿಸಿದರು.
ಈ ಹೋಟೆಲ್ ಯೋಜನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ, ಲಿಫ್ಟ್ ವ್ಯವಸ್ಥೆ ಕಾರ್ಯಾಚರಣೆ ಮತ್ತು ನೀರಿನ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಅವರಿಗೆ ಸೂಚಿಸಿದರು.
ಅಲ್ಲದೇ ಬಾಕಿ ಇರುವ ಫರ್ನಿಚರ್ ವ್ಯವಸ್ಥೆ, ಸ್ಟೀಮಿಂಗ್ ಫೂಲ್ ನಿರ್ಮಾಣ, ಗಾರ್ಡನಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತವಾದ ಪ್ರಸ್ತಾವನೆ ತಯಾರಿಸಿ ಆಯುಕ್ತರು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲು ಸೂಚಿಸಿದರು.
ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನ್ನಗೊಂಡ, ಕಂದಾಯ ನೀರೀಕ್ಷಕ ಸಂತೋಷ ಪಾಟಕ್, ಸರ್ವೇಯರ್ ಕಾತ್ರಾಳ, ಕಂದಾಯ ನೀರಿಕ್ಷಕರು, ಮಹಾಲ್ ಬಾಗಾಯತ್ ಗ್ರಾಮ ಆಡಳಿತಾಧಿಕಾರಿಗಳು, ಅಧಿಕಾರಿಗಳಾದ ಬಿ.ಎಚ್.ಕುಡಪಲಿ, ರೈಟ್ಸ್ ಸಂಸ್ಥೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 