ಮಳೆಗಾಲದಲ್ಲಿ ಜಲಸಾಹಸ ಕ್ರೀಡೆ ರಾಫ್ಟಿಂಗ್ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಆದೇಶ: ಜೂ.1 ಅಗಸ್ಟ 31ರತನಕ ಜಲಾ ಸಾಹಸ ಕ್ರೀಡೆಗೆ ನಿಷೇಧ
District Collector orders suspension of water adventure sports rafting during monsoon season: Water
ಕಾರವಾರ 31 : ಮುಂಗಾರು ಹಿನ್ನೆಲೆಯಲ್ಲಿ ಜನರ ,ಪ್ರವಾಸಿಗರ ಜೀವ ರಕ್ಷಣೆಗಾಗಿ ನದಿ, ನದಿ ಹಿನ್ನೀರು, ದ್ವೀಪ , ಸಮುದ್ರದಲ್ಲಿ ನಡೆವ ರಾಫ್ಟಿಂಗ್ ಸೇರಿದಂತೆ, ಜಲ ಸಾಹಸ ಕ್ರೀಡೆಗಳನ್ನು, ಕಟ್ಟು ನಿಟ್ಟಾಗಿ ನಡೆಸದಂತೆ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ. ಪ್ರಸಕ್ತ ವರ್ಷದ ಮಳೆಗಾಲದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಹಾಗೂ ನದೀತೀರಗಳಲ್ಲಿ ಪ್ರವಾಸಿಗರಿಗೆ ರಾಫ್ಟಿಂಗ್, ಬೋಟಿಂಗ್, ಜಲ ಸಾಹಸ ಕ್ರೀಡೆಗಳನ್ನು ಜೂ. 1 ರಿಂದ ಅಗಸ್ಟ 31 ನಡೆಸದಂತೆ ಪ್ರಕೃತಿ ವಿಕೋಪ ನಿರ್ವಹಣಾ ಅಧಿನಿಯಮ ಸೆಕ್ಷನ್ 33 ಮತ್ತು34 ರ ಅಡಿ ನಿಷೇಧ ಹೇರಲಾಗಿದೆ.
ಕಾಳಿ ನದಿಯಲ್ಲಿ ರಾಫ್ಟಿಂಗ್ , ನದಿ ಹಿನ್ನೀರಿನಲ್ಲಿ ಬೋಟಿಂಗ್ , ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್, ಸಮುದ್ರದಾಳದ ಜಲ ಸಾಹಸ, ಬೋಟ್ ಸ್ಕೀಯಿಂಗ್, ಬಾನಾನ ಬೋಟ್, ಕಯಾಕಿಂಗ್ ಮುಂತಾದ ಜಲ ಸಾಹಸ ಕ್ರೀಡೆಗಳಿಗೆ ಮೂರು ತಿಂಗಳ ಕಾಲ ನಿಷೇಧ ಹೇರಲಾಗಿದೆ. ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಜಲ ಸಾಹಸ ಕ್ರೀಡೆಗಳನ್ನು ಮಳೆಗಾಲದಲ್ಲಿ ನಡೆಸದಂತೆ ಆಯಾ ವಿಭಾಗದ ಸಹಾಯಕ ಕಮಿಷನರ್ ಗಳು, ತಹಶಿಲ್ದಾರರು, ಗ್ರಾಮ ಪಂಚಾಯತ್ ಪಿಎಒ ಗಳು ನೋಡಿಕೊಳ್ಳಬೇಕು.ಜಲ ಸಾಹಸ ಕ್ರೀಡೆ ನಿಷೇಧ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಪ್ರವಾಸಿಗರ ಜೀವ ರಕ್ಷಣೆ ಸಹ ಜಿಲ್ಲಾಡಳಿತದ ಮೇಲಿದ್ದು, ಆದೇಶವನ್ನು ಜೂ.1 ರಿಂದ ಅನುಷ್ಠಾನಕ್ಕೆ ತರಲು ಲಿಖಿತ ಆದೇಶ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 