ಮುರಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 20 ಬೆಂಚುಗಳ ವಿತರಣೆ

ಮುರಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 20 ಬೆಂಚುಗಳ ವಿತರಣೆ    Distribution of 20 benches to students at Murugundi Government High School

ಚಿಕ್ಕೋಡಿ 06 : ಮುರಗುಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಯವರ ಅನುದಾನದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 20 ಬೆಂಚುಗಳನ್ನು ವಿತರಿಸಲಾಯಿತು.     

ಬೆಂಚಗಳನ್ನು ವಿತರಿಸಿ ಮಾತನಾಡಿದ ಸಂಸದ ಪ್ರಿಯಾಂಕ ಜಾರಕಿಹೊಳಿ, ನನ್ನ ಲೋಕಸಭಾ ವ್ಯಾಪ್ತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನವನ್ನು ಮಾಡುತ್ತಿರುವೆ ಎಂದವರು ಸೌಲಭ್ಯಗಳ ಕೊರತೆ ಇರುವ ಶಾಲೆಗಳ ಅಭಿವೃದ್ಧಿ ಸಮಿತಿ ಸದಸ್ಯರು ನನ್ನನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು. 

ಎಸ್ಡಿಎಂಸಿ ಅಧ್ಯಕ್ಷ ಮಕ್ಬುಲ್ ನದಾಫ್ ಮಾತನಾಡಿ, ಮುರುಗುಂಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಭಾಭವನ ಒಂದು ಅವಶ್ಯಕತೆ ದಯವಿಟ್ಟು ನಮ್ಮ ಶಾಲೆಗೆ ಸಭಾಭವನ ಮಂಜೂರು ಮಾಡಿಸಬೇಕೆಂದು ಸಂಸದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್‌. ಮುಂಜೆ, ಕಾಂಗ್ರೆಸ್ ಧೂರಿಣರಾದ ರಮೇಶ್ ಸಿಂದಗಿ,

ಗಜಾನನ ಮಂಗಸೂಳಿ, ರಾವಸಾಹೇಬ್ ಐಹೊಳೆ, ಸಚಿನ್ ಬುಟಾಳಿ, ಸುನಿತಾ ಐಹೊಳೆ, ಶಾಲಾ ಮುಖ್ಯಾದಾಪಕ ರವೀಂದ್ರ ಕಡಾಕಡಿ, ಎಸ್‌ಡಿಎಮ್‌ಸಿ ಉಪಾಧ್ಯಕ್ಷ ರವಿ ಶೇಷಗೋಳ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ ಜಿಲ್ಲಾ ಪಂಚಾಯತ್ ಅಧಿಕಾರಿ ಮಟ್ ವೀರಣ್ಣ ವಾಲಿ, ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿವೇಕ್ ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.