ದನಕರಗಳಿಗೆ ರೋಗ ಮುಕ್ತವಾಗಿದ್ದಕ್ಕೆ ಹರಿಕೆ ತೀರಿಸಿದರು

ಹುಕ್ಕೇರಿ21:  ಪಟ್ಟಣದಲ್ಲಿ ಜಾನುವಾರಗಳಿಗೆ ಆಗಿರುವಂತಹ ಹುಣ್ಣು ಕಾಲು ಬೇನೆ ರೋಗ ನಿವಾರಣೆಯಾಗಲೆಂದು ಹುಕ್ಕೇರಿ ಕುರುಬರ ಸಮಾಜ ವತಿಯಿಂದ ಹರಿಕೆ ಹೊತ್ತಿಕೊಂಡಿದ್ದರು ಅದೇ ರೀತಿ ಜಾನುವಾರಗಳಿಗೆ ಯಾವುದೇ ತೊಂದರೆ ಆಗದೆ ಆ ರೋಗಾನು ಹೋಯಿತು ದನಕರಗಳು ಹೊಲದಲ್ಲಿ ಕೂಳೋದಕ್ಕೆ ಮಾತ್ರ ಅಲ್ಲ ಅದು ನಮ್ಮ ಮನೆಯ ಒಂದು ಸದಸ್ಯ ಆದಕಾರಣ ನಮ್ಮ ಸಮುದಾಯದವರು ದೀರ್ಘದಂಡ ನಮಸ್ಕಾರ ಹಾಕುತಾ ಜೆಂಡಾಕಟ್ಟಿ ಹತ್ತಿರಇರುವ ಬ್ರಹ್ಮ ದೇವರ ಮಂದಿರದಿಂದ ಡೊಳ್ಳು ನಾದದೊಂದಿಗೆ  ದಂಡವತ್ ಹಾಕುತ್ತಾ  ಬಡಿಗೇರ ಗಲ್ಲಿ ದ್ಯಾಮವ್ವದೇವಿ ಮತ್ತು ಹನುಮಾನ್ ಮಂದಿರ್ ಹಾಗೂ ಲಕ್ಷ್ಮೀದೇವಿ ಗುಡಿಗೆ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ಇನ್ನು ಮುಂದೆ ಯಾವುದೇರೀತಿ ದನಕರುಗಳಿಗೆ ತೊಂದರೆ ಆಗಬಾರದೆಂದು ಲಕ್ಷ್ಮಿ ದೇವಿಗೆ ಎಲ್ಲರೂ ತಲೆಬಾಗಿ ನಮಸ್ಕರಿಸಿದರು. ಪುರಸಭೆ ಸದಸ್ಯೆಯಾದ ಪಾರ್ವತಿ ಲಟ್ಟಿ ಮಾರುತಿ ಗಡದಾರ್. ಶ್ರೀಕಾಂತ್ ಕುಬಾನ್ಗೋಳ. ಬಾಬು ಕರಿಗಾರ. ಬೀರಪ್ಪ ಹೆಗಡೆ. ನಿಂಗಪ್ಪ ಮುತನಾಳೆ. ಲಕ್ಷ್ಮಣ್ ಕುಬಾನಗೊಳ. ಹಾಗೂ ಚಿಕ್ಕ ಮಕ್ಕಳು ಯುವಕರು ಹಿರಿಯರು ಹಾಗೂ ಮಹಿಳೆಯರು ಆರತಿ ಮತ್ತು ಅಂಬಲಿ ಬಿಂದಿ ಹೊತ್ತು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.