ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಕೃಷಿಯಲ್ಲಿ ನ್ಯಾನೋ ಗೊಬ್ಬರಗಳ ವೈಶಿಷ್ಟ್ಯ ಕುರಿತು ವಿಚಾರ ವಿನಿಮಯ ಕಾರ್ಯಕ್ರಮ

  ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಕೃಷಿಯಲ್ಲಿ ನ್ಯಾನೋ ಗೊಬ್ಬರಗಳ ವೈಶಿಷ್ಟ್ಯ ಕುರಿತು ವಿಚಾರ ವಿನಿಮಯ ಕಾರ್ಯಕ್ರಮ Discussion program on the features of nano-fertilizers in agriculture at Krishi Vigana Kendra, Matti

ಲೋಕದರ್ಶನ ವರದಿ 

  ನೇಸರಗಿ 24 : ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಕೋರಮಂಡಲ್ ಇಂಟರ್‌ನ್ಯಾಷನ್ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 24.7.2026 ರಂದು ಕೃಷಿಯಲ್ಲಿ ನ್ಯಾನೋ ಗೊಬ್ಬರಗಳ ವೈಶಿಷ್ಟ್ಯ ಕುರಿತು ವಿಚಾರ ವಿನಿಮಯ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿಯವರು ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರಗಳ ಬೆಲೆಯಿಂದ ವ್ಯವಸಾಯದ ವೆಚ್ಚ ಅಧಿಕವಾಗುತ್ತಿದೆ ಹಾಗೂ ಪರಿಸರ ನಾಶವಾಗುತ್ತಿದೆ.  ಈ ಹಿನ್ನಲೆಯಲ್ಲಿ ಕೃಷಿಯಲ್ಲಿ ನ್ಯಾನೋ ಗೊಬ್ಬರಗಳ ಬಳಕೆಯು ಪರ್ಯಾಯ ಮಾರ್ಗವಾಗಿದೆ. 

ಇದರಿಂದ ವ್ಯವಸಾಯದ ಖರ್ಚು ಕಡಿಮೆಗೊಳ್ಳುವುದಲ್ಲದೆ ಪರಿಸರ ನಾಶವನ್ನು ತಡೆಗಟ್ಟಲು ಸಹಕಾರಿಯಾಗಿದೆ.  ಆದ್ದರಿಂದ ರೈತರು ನ್ಯಾನೋ ಗೊಬ್ಬರಗಳನ್ನು ಬಳಸಬೇಕೆಂದು ಕರೆ ನೀಡಿದರು.   ಕೇಂದ್ರದ ಮಣ್ಣು ವಿಜ್ಞಾನಿ ಎಸ್‌. ಎಮ್‌. ವಾರದ ಮಾತನಾಡಿ, ನ್ಯಾನೋ ಗೊಬ್ಬರ ಕಣಗಳು ಅತ್ಯಂತ ಚಿಕ್ಕದಾಗಿದ್ದು, ಪೋಷಕಾಂಶಗಳನ್ನು ಹೊಂದಿದ ಅಧಿಕವಾದ ಮೇಲ್ಮೈ ಕ್ಷೇತ್ರವನ್ನು ಹೊಂದಿರುತ್ತವೆ.  ಸಾಂಪ್ರದಾಯಿಕ ರಸಗೊಬ್ಬರಗಳನ್ನು ಬಳಸಿದಾಗ ಪೋಷಕಾಂಶ ಬಳಕೆ ಸಾಮರ್ಥ್ಯವು ಕಡಿಮೆಯಾಗುತ್ತಿದೆ.  ಈ ಹಿನ್ನಲೆಯಲ್ಲಿ ನ್ಯಾನೋ ಗೊಬ್ಬರಗಳನ್ನು ಬಳಸಿದಾಗ ಗೊಬ್ಬರ ಬಳಕೆ ಸಾಮರ್ಥ್ಯವು ಶೇಕಡಾ 80 ರಷ್ಟು ಅಧಿಕವಾಗುವುದು ಹಾಗೂ ಬೆಳೆಗಳ ಇಳುವರಿಯು ಹೆಚ್ಚಾಗುವುದು ಎಂದು ತಿಳಿಸಿದರು. 

ತಾಂತ್ರಿಕ ಅಧಿವೇಶನದಲ್ಲಿ ರಾಯಚೂರು ಕೋರಮಂಡಲ್ ಇಂಟರ್‌ನ್ಯಾಷನ್ ಲಿಮಿಟೆಡ್‌ನ ಹಿರಿಯ ಬೇಸಾಯ ಶಾಸ್ತ್ರಜ್ಞ ಪ್ರಶಾಂತಕುಮಾರ ಕೃಷಿಯಲ್ಲಿ ನ್ಯಾನೋ ಗೊಬ್ಬರ ತಾಂತ್ರಿಕತೆ ಹಾಗೂ ಅದರದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.   ವಿಜಯಪುರ ಕೋರಮಂಡಲ್ ಇಂಟರ್‌ನ್ಯಾಷನ್ ಲಿಮಿಟೆಡ್‌ನ ವಲಯ ವ್ಯವಸ್ಥಾಪಕ ರಂಜೀತಕುಮಾರ ಕಂಪನಿಯ ಉತ್ಪನ್ನಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ನಿಖಿಲ್ ಕುವಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಮಹೇಶಕುಮಾರ ವಂದಿಸಿದರು.  ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ರೈತರು ಭಾಗವಹಿಸಿ ನ್ಯಾನೋ ಗೊಬ್ಬರಗಳ ಕುರಿತು ಮಾಹಿತಿ ಪಡೆದರು.