ಗದಗದಿಂದ ಧರ್ಮಸ್ಥಳ ಹಾಗೂ ಮಂಗಳೂರು ನಗರಕ್ಕೆ ನೇರ ಬಸ್ ಸಂಚಾರ ವ್ಯವಸ್ಥೆ
Direct bus service from Gadag to Dharmasthala and Mangalore city
ಗದಗ 21 : ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ (ಫೆ. 20) ರಂದು ಗದಗದಿಂದ ಧರ್ಮಸ್ಥಳ ಹಾಗೂ ಮಂಗಳೂರು ನಗರಕ್ಕೆ ನೇರ ಬಸ್ ಸಂಚಾರಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಗದಗ ಮಾರ್ಗವಾಗಿ ಹೊರಡುವ ಬಸ್ ಲಕ್ಷೆ-್ಮಶ್ವರ, ಹಾವೇರಿ, ರಾಣೇಬೆನ್ನೂರು, ಹರಿಹರ, ಶಿವಮೊಗ್ಗ, ಕಡೂರು, ಉಡುಪಿ, ಚಿಕ್ಕಮಗಳೂರು, ಉಜಿರೆ, ಧರ್ಮಸ್ಥಳಕ್ಕೆ ತಲುಪುವ 2 ಬಸ್ ಗಳು ಪ್ರತಿದಿನ ಸಂಜೆ 7 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡುತ್ತದೆ ಬಸ್ ನ ಪ್ರಯಾಣದ ದರ 455 ರೂಪಾಯಿ ಇರುತ್ತದೆ.
ಗದಗ ಮಾರ್ಗವಾಗಿ ಹೊರಡುವ ಬಸ್ ಹುಬ್ಬಳ್ಳಿ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರುಗೆ ತಲುಪುವ 2 ಬಸ್ ಗಳು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡುತ್ತದೆ ಬಸ್ ನ ಪ್ರಯಾಣದ ದರ 472 ರೂಪಾಯಿ ಇರುತ್ತದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ ಅಸೂಟಿ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಗ್ಯಾರಂಟಿ ಸಮಿತಿ ಸದಸ್ಯರಾದ ಕೆ.ಎಚ್. ಪಾಟೀಲ್, ಮೀನಾಕ್ಷಿ ಬೆನಕಣ್ಣವರ, ಸಾವಿತ್ರಿ ಹೂಗಾರ, ಗದಗ ವಿಭಾಗಿಯ ನಿಯಂತ್ರಣಾಧಿಕಾರಿ ಪರಶುರಾಮ್.ವೈ.ಗಡೆದ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಂದ್ರಶೇಖರ ಇಟಗಿ, ವಿಭಾಗೀಯ ಸಂಚಾರಾಧಿಕಾರಿ ಪಿ.ವಿ.ಮೆತ್ರಿ, ಗದಗ ಡಿಪೋ ಮ್ಯಾನೇಜರ ಬಿ.ಎಲ್.ಗೆನ್ನೂರು, ಬೆಟಗೇರಿ ಡಿಪೋ ಮ್ಯಾನೇಜರ್ ರೋಹಿನಿ ಆರ್.ಬಿ, ನಿಲ್ದಾಣಾಧಿಕಾರಿ ಎಂ.ಬಿ. ತಿಮ್ಮನಗೌಡ್ರು , ಸಾರಿಗೆ ನಿಯಂತ್ರಕರಾದ ಎಸ್.ಎಫ್. ಸಂಗಣ್ಣನವರ, ಎ.ಎಸ್. ಅಂಗಡಿ, ಬಿ.ಎನ್.ಪಾಟೀಲ್, ಎಸ್.ಎನ್. ಕಡೆಮನಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 