ನೂತನ ಎಸ್ಪಿಯಾಗಿ ದಿಪನ್ ನೇಮಕ ಎಸ್ಪಿ ನಾರಾಯಣ ವರ್ಗಾವಣೆ
Dipan appointed as new SP, SP Narayan transferred
ಕಾರವಾರ 15: ಉತ್ತರ ಕನ್ನಡ ಜಿಲ್ಲಾ ಎಸ್ಪಿ ನಾರಾಯಣ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಡಿ ಎಸ್ ಪಿ ಯಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಎಸ್ಪಿ ನಾರಾಯಣ ಅವರು ಒಂದು ವರ್ಷ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ರೌಡಿಗಳ ಪಾಲಿಗೆ ಕೆಟ್ಟ ಸ್ವಪ್ನವಾಗಿದ್ದರು. ಪೊಲೀಸರನ್ನು ವಿದ್ಯಾರ್ಥಿ ಸ್ನೇಹಿಯಾಗಿ ಮಾಡುವಲ್ಲಿ ಹೊಸ ಪ್ರಯೋಗ ಮಾಡಿದ್ದರು. ಮಾಧ್ಯಮಗಳಿಂದ ದೂರ ಇದ್ದ ಅವರು ಫೇಸ್ ಬುಕ್ ಮೂಲಕ ಪೊಲೀಸ್ ಇಲಾಖೆಯ ಕೆಲಸಗಳನ್ನು ಪ್ರಚಾರ ಮಾಡುತ್ತಿದ್ದರು. ಅಪರಾಧ ಪ್ರಕರಣಗಳಲ್ಲಿ , ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದವರ ಕಾಲಿಗೆ ಗುಂಡು ಹಾರಿಸುವ ಮೂಲಕ ಅಪರಾಧಿಗಳಲ್ಲಿ ಭಯ ಹುಟ್ಟಿಸಿದ್ದರು. ನೂತನ ಎಸ್ಪಿಯಾಗಿ ದಿಪನ್ ನೇಮಕ : ಉತ್ತರ ಕನ್ನಡ ಜಿಲ್ಲೆಗೆ ದೀಪನ್ ಎಂ.ಎನ್ .ಅವರನ್ನು ನೂತನ ಎಸ್ಪಿಯಾಗಿ ಸರ್ಕಾರ ನೇಮಕ ಮಾಡಿದೆ. ದೀಪನ್ 2019ರ ಐಪಿಎಸ್ ಅಧಿಕಾರಿ. ಕೆಎಸ್ ಆರ್ ಪಿ ಬಟಾಲಿಯನ್ ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈಗ ಉತ್ತರ ಕನ್ನಡ ಜಿಲ್ಲೆಯ ಹೊಸ ಎಸ್ಪಿಯಾಗಿ ಆಗಮಿಸಲಿದ್ದಾರೆ.....
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 