ಧ್ಯಾನಚಂದ್ ಕ್ರೀಡಾಪಟುಗಳಿಗೆ ಸ್ಫೂರ್ತಿ: ಮಲ್ಲೇದ

ಧ್ಯಾನಚಂದ್ ಕ್ರೀಡಾಪಟುಗಳಿಗೆ ಸ್ಫೂರ್ತಿ: ಮಲ್ಲೇದ   Dhyan Chand is an inspiration to sportspersons: Malled


ದೇವರಹಿಪ್ಪರಗಿ 29: ಭಾರತಾಂಬೆಯ ಹೆಮ್ಮೆಯ ಪುತ್ರ ಹಾಕಿ ಮಾಂತ್ರಿಕ ಧ್ಯಾನ ಚಂದ್ ಭಾರತೀಯ ಹಾಕಿ ಕ್ರೀಡೆಯನ್ನು ವಿಶ್ವದಾದ್ಯಂತ ಹೆಮ್ಮೆಯಿಂದ ಮೆರೆದ ಮಹಾನ್ ಕ್ರೀಡಾಪಟು ಅವರ ಅದ್ಭುತ ಕೌಶಲ್ಯ, ಶಿಸ್ತು ಪರಿಶ್ರಮ ಮತ್ತು ದೇಶಭಕ್ತಿಯು ಇಂದಿಗೂ ಕೋಟ್ಯಾಂತರ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದೆ ಎಂದು ಜಾಲವಾದ ಗ್ರಾಮದ ಕೆಪಿಎಸ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಸಂಗು ಮಲ್ಲೇದ ಹೇಳಿದರು.  

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.   ಅಧ್ಯಕ್ಷತೆಯನ್ನು ಸ್ಥಳೀಯ ಪ್ರೌಢಶಾಲೆಯ ಉಪ ಪ್ರಾಚಾರ್ಯ ಎ.ಎಸ್‌. ಹೊಸಗೌಡರ ವಹಿಸಿ ಅವರ ಕ್ರೀಡ ಸ್ಪೂರ್ತಿಯ ಬಗ್ಗೆ ಮಾತನಾಡಿದರು. ಶಿಕ್ಷಕರುಗಳಾದ ಆರ್‌.ಎಫ್‌. ನದಾಫ್ ಹಾಗೂ ಎಚ್‌.ಎಂ.ಬಗಲಿ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹೇಳಿದರು.   

ಶಿಕ್ಷಕರಾದ ಬಸವರಾಜ ಕಮತರ ನಿರೂಪಣೆ , ಬಿ.ಎಸ್‌.ಅಗಸಬಾಳ ಸ್ವಾಗತಿತ, ಎ.ಎಸ್‌. ಪತ್ತಾರ ವಂದಿಸಿದರು.  ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.