ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶ್ರೀಗಳ ಪ್ರಥಮ ತುಲಾಭಾರ
Dharwad Taluk Amminabavi Sansthan Panchagriha Hiremath Sri Abhinava Shantalinga Sri's First Tulabhar
ಲೋಕದರ್ಶನ ವರದಿ
ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಥಮ ತುಲಾಭಾರ ಬುಧವಾರ ಮೃತ್ಯುಂಜಯ ನಗರದ ಬಳಿ ಇರುವ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಭಕ್ತರಾಗಿದ್ದ ದಿ. ಅಶೋಕ ಕುಸೂಗಲ್ಲ ಅವರ ಪುತ್ರ ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ಜಗನ್ನಾಥ ಕುಸೂಗಲ್ಲ ಹಾಗೂ ಇನ್ನೋರ್ವ ಪುತ್ರ ಶ್ರೀಶೈಲ ಕುಸೂಗಲ್ಲ ಅವರು ತಮ್ಮ ವಿವಾಹ ಮಹೋತ್ಸವದಲ್ಲಿ ತಾಯಿ ಸರ್ವಮಂಗಳಾ ಕುಸೂಗಲ್ಲ ಅವರ ಸಂಕಲ್ಪದಂತೆ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನಾಣ್ಯದ ತುಲಾಭಾರವನ್ನು ಜರುಗಿಸಿ ಆಶೀರ್ವಾದ ಪಡೆದರು.
ಶುಭಾಶೀರ್ವಾದ ಸಂದೇಶ ನೀಡಿದ ಶ್ರೀಗಳು, ತಾವು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷರಾಗಿ 18 ವರ್ಷಗಳು ಗತಿಸಿದ್ದು, ಶ್ರೀಮಠದ ಭಕ್ತರಾಗಿದ್ದ ದಿ.ಅಶೋಕ ಕುಸೂಗಲ್ಲ ಅವರ ಪುತ್ರರೀರ್ವರೂ ನಮ್ಮ ಪ್ರಥಮ ತುಲಾಭಾರ ಸೇವೆಯ ಪ್ರಶಂಸೆಗೆ ಹಾಗೂ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಪುರುಷರಾದ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಹಾಗೂ ಗುರುವರ್ಯರಾದ ಪೂಜ್ಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಕೃಪಾಕಾರುಣ್ಯಕ್ಕೆ ಪಾತ್ರರಾಗಿದ್ದಾರೆ ಎಂದರು.
ಈರಣ್ಣ ಕುಸೂಗಲ್ಲ, ರಾಚಪ್ಪ ಕುಸೂಗಲ್ಲ. ಸುನೀಲ ಗುಡಿ, ರಮೇಶ ಕುಸೂಗಲ್ಲ, ಚಂದ್ರಶೇಖರ ಕುಸೂಗಲ್ಲ, ನಿಂಗಪ್ಪ ದೊಡವಾಡ, ದೇವೇಂದ್ರ್ಪ ಕುಸೂಗಲ್ಲ, ರವಿ ಇಂದೂರ, ಈಶ್ವರ್ಪ ಕುಸೂಗಲ್ಲ, ಮಹಾಂತೇಶ ಕಡ್ಲೆಪ್ಪನವರ, ನಾಗರಾಜ ಮೈಲಾರ ಹೊಂಬಳ, ಮುತ್ತಪ್ಪ ಕೆರಿ, ಸದಾನಂದ ಮುಂದಿನಮನಿ, ಮುತ್ತಪ್ಪ ಹನಸಿ, ಸೋಮಲಿಂಗಶಾಸ್ತ್ರೀ ಗುಡ್ಡದಮಠ ಸೇರಿದಂತೆ ಇತರ ಭಕ್ತರು ಇದ್ದರು.
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ 