ಶ್ರೀಶೈಲ ಪಾದಯಾತ್ರಿಗಳಿಗೆ ಭಕ್ತಿ ಸೇವೆ ನಡೆಸಲಾಗುವದು: ವೀರೇಶ

ಹುನಗುಂದ 28: ನಗರದ ಮಲ್ಲಿಕಾರ್ಜುನ ಪಾದಯಾತ್ರಾ ಸೇವಾ ಸಮಿತಿಯು ಕಳೆದ ಶ್ರೀಶೈಲ ಪಾದ ಯಾತ್ರಾರ್ಥಿಗಳಿಗೆ ಕಳೆದ 10ವರ್ಷದಂತೆ ಈ ವರ್ಷವೂ ನಗರದ ಬಸವ ಮಂಟಪದಲ್ಲಿ ಪ್ರಸಾದ ಸೇವೆಯೊಂದಿಗೆ ವಿವಿಧ ಬಗೆಯ ಸೇವೆ ಒದಗಿಸಲಾಗುವದೆಂದು ಸಂಘದ ಅಧ್ಯಕ್ಷ ವೀರೇಶ ಕುರ್ತಕೋಟಿ ಹೇಳಿದರು.                                                                                ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ವಿಶ್ವದಾದ್ಯಂತ ಮಹಾಮಾರಿ ಕೊರೊನಾ ಎರಡನೆ ಅಲೆ ಹರಡದಂತೆ ಸರ್ಕಾರ ಮತ್ತು ತಾಲೂಕಾಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಕೆಗಳು ಕೈಕೊಂಡ ನಿರ್ದೇಶನದಂತೆ ಮತ್ತು ಅವರ ಮಾರ್ಗಸೂಚನೆಯ ಹಾದಿಯಲ್ಲಿ ಈ ಭಕ್ತಿ ಸೇವೆ ನಡೆಸಲಾಗುವದು. 

ಮಾ. 29ರಿಂದ 4-5ದಿನಗಳವರಗೆ ತಂಡೋಪತಂಡವಾಗಿ ಅಥಣಿ, ರಬಕವಿ-ಬನ್ನಟ್ಟಿ, ನಿಪ್ಪಾಣಿ, ರಾಯಭಾಗ ಘಟಪ್ರಭಾ, ಗೋಕಾಕ, ಯರಗಟ್ಟಿ, ಮೂಡಲಗಿ, ಕಲಾದಗಿ, ಲೋಕಾಪೂರ, ತೇರದಾಳ, ಜಮಖಂಡಿ, ಸಾವಳಗಿ, ಮುಧೂಳ, ಮಹಾಲಿಂಗಪೂರ ತಾಲೂಕ ಸ್ಥಳ ಮತ್ತು ಗ್ರಾಮೀಣ ಪ್ರದೇಶಗಳಿಂದ ಹುನಗುಂದ ಮಾರ್ಗವಾಗಿ ತೆರಳುವ ಶ್ರೀಶೈಲ ಪಾದಯಾತ್ರಾರ್ಥಿಗಳಿಗೆ ಮಾರ್ಚ 29ಬೆಳಿಗ್ಗೆಯಿಂದ ಲಘು ಪ್ರಸಾದ, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ವಾಸ್ತವ್ಯ ಮತ್ತು ವೈಧ್ಯಕೀಯ ಸೇವೆ ಒದಗಿಸಲಾಗುವದೆಂದು ಸಮೀತಿ ಅಧ್ಯಕ್ಷ ವೀರೇಶ ಕುರ್ತಕೋಟಿ ತಿಳಿಸಿದರು. ಗೌರವಾಧ್ಯಕ್ಷ ಶಿವನಾಗಪ್ಪ ದರಗಾದ ಮಾತನಾಡಿ ದೂರದಿಂದ ಹುನಗುಂದ ಮಾರ್ಗವಾಗಿ ತರಳುವ ಪಾದಯಾತ್ರಾರ್ಥಿಗಳು ಬಸವ ಮಂಟಪದಲ್ಲಿ ಒದಗಿಸುವ ಸೌಲಭ್ಯಗಳನ್ನು ಪಡೆದು ಮುಂದೆ ಸಾಗಬೇಕು. ಉದುರಸಜ್ಜಕ, ಅಳಕ ಸಜ್ಜಕ, ರೊಟ್ಟಿ ಚಟ್ನಿ, ವಿವಿದ ಬಗೆಯ ತರಕಾರಿ ಪಲ್ಲೆ, ನುಗ್ಗಿ ಸಾರು, ಮೊಸರು. ಮೊಸರನ್ನ, ಅವಲಕ್ಕಿ ಮತ್ತು ಚೂರಮರಿ ಸೂಸಲ, ಉಪ್ಪಿಟ್ಟು, ಜೋಳದ ಸಂಗಟಿ ಮತ್ತು ಮಜ್ಜಿಗಿ, ಶರಬತ್, ಚಹಾ, ಬಿಸ್ಕೀಟ್ ಒದಗಿಸಲಾಗುವದೆದು ದರಗಾದ ತಿಳಿಸಿದರು.   ಸಂಘದ ಉಪಾಧ್ಯಕ್ಷ ಗಿಡಿಯಪ್ಪ ಹೂಲಗೇರಿ, ಜಗಧೀಶ ಬಳ್ಳೋಳ್ಳಿ, ಕಾರ್ಯದರ್ಶಿ ಮಹಾಂತೇಶ ಹೊದ್ಲೂರ, ಮಲ್ಲಪ್ಪ ಪಲ್ಲೇದ, ಪರಸಪ್ಪ ಮಜ್ಜಗಿ, ಶೇಖಯ್ಯ ಪುರದಯ್ಯನಮಠ, ಶಿವು ಬಾದವಾಡಗಿ, ಈರಪ್ಪ ಮೇಳಿ, ಸಂಗಪ್ಪ ಕುಷ್ಟಗಿ, ಮಲ್ಲನಗೌಡ ಪಾಟೀಲ, ಸಂಗಮೇಶ ವೀರಾಪೂರ, ಮುತ್ತಣ್ಣ ಹಳಪೇಟಿ, ಶರಣಪ್ಪ ಹಳಪೇಟಿ, ಸೋಮು ಬೆಳ್ಳಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.