ಫೆ.12ರಂದು ಬೆಟಗೇರಿ ಸದ್ಗುರು ಸಿದ್ಧಾರೂಢರ ಸದ್ಭಭಕ್ತರಿಂದ ಹುಬ್ಬಳ್ಳಿ ಮಠಕ್ಕೆ ಪಾದಯಾತ್ರೆಗೆ ಚಾಲನೆ ಕಾರ್ಯಕ್ರಮ
Devotees of Betageri Sadguru Siddharudhar will launch a footpath to Hubballi Math on February 12th.
ಬೆಟಗೇರಿ 10 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಸಿದ್ಧಾರೂಢರ ಸದ್ಭಕ್ತರು ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳಸಲಿರುವ ಪ್ರಯುಕ್ತ ಫೆ.12ರಂದು ಮುಂಜಾನೆ 9 ಗಂಟೆಗೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ 11ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಶರಣರಾದ ಮಲ್ಲಪ್ಪ ಪಣದಿ, ಸಿದ್ದಪ್ಪ ಹೊರಟ್ಟಿ, ಭಾಳಪ್ಪ ಕನೋಜಿ ನೇತೃತ್ವ ವಹಿಸಲಿದ್ದು, ಸ್ಥಳೀಯ ಸದ್ಗುರು ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಅಧ್ಯಕ್ಷತೆ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶರಣರಾದ ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ ಸೇರಿದಂತೆ ಹರ, ಗುರು, ಚರಮೂರ್ತಿಗಳು, ಗಣ್ಯರು ಸ್ಥಳೀಯ ಗಣ್ಯರು, ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಟಗೇರಿ ಗ್ರಾಮದಿಂದ ಫೆ.12ರಂದು ಪಾದಯಾತ್ರೆ ಆರಂಭವಾಗಿ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಫೆ.15ರಂದು ಪಾದಯಾತ್ರೆ ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರ ಮಠ ತಲುಪಲಿದೆ. ಸ್ಥಳೀಯ ಶರಣಜೀವಿ ಈಶ್ವರ ಬಸಪ್ಪ ಬಳಿಗಾರ ಅವರಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಸತತ 11 ವರ್ಷಗಳಿಂದ ಮಹಾಪ್ರಸಾದ ವ್ಯವಸ್ಥೆ ಹಮ್ಮಿಕೊಂಡಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 