ಪರಿಪೂರ್ಣ ಶೈಕ್ಷಣಿಕ ಸೇವೆಗೆ ಸಂಕಲ್ಪ ತೊಟ್ಟ ರಾಣೇಬೆನ್ನೂರಿನ ದೇವಿಕಾ ವಾಣಿಜ್ಯ, ವಿಜ್ಞಾನ ಕಾಲೇಜು : ಕೆ. ಎಸ್‌. ನಾಗರಾಜ್

Devika Commerce and Science College, Ranebennur, committed to providing perfect educational services

ಹಾವೇರಿ 17 :  ಜಿಲ್ಲೆಯ  ವಾಣಿಜ್ಯ ನಗರವೆಂದು ಖ್ಯಾತಿ ಪಡೆದ ರಾಣೇಬೆನ್ನೂರಿನ ಗಣೇಶನಗರದಲ್ಲಿರುವ, ಶ್ರೀ ವೆಂಕಟೇಶ್ವರ ವಿದ್ಯಾ ಸಂಸ್ಥೆಯ, ದೇವಿಕಾ ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾಲಯವು, ಜಿಲ್ಲೆಯಲ್ಲಿ ಅತೀ ದೊಡ್ಡದಾದ ವಾಣಿಜ್ಯ ನಗರಕ್ಕೆ  ಈ ಕಾಲೇಜು ಕಳಸಪ್ರಾಯವಾಗಿ, ಕಂಗೊಳಿಸುತ್ತಲ್ಲಿದೆ.  

ಕಳೆದ 2007 ರ ಸಾಲಿನಲ್ಲಿ ಆಡಳಿತ ಮಂಡಳಿಯವರ ದೂರ ದೃಷ್ಟಿ ಮತ್ತು ಆಧುನಿಕ ವ್ಯವಸ್ಥೆ  ಯೋಜನೆ, ಮತ್ತು  ತ್ಯಾಗ ಮನೋಭೂಮಿಕೆಯಲ್ಲಿ  ಆರಂಭಗೊಂಡಿರುವ ಈ ಕಾಲೇಜು, ಭವಿಷ್ಯದ ಐವತ್ತು ವರ್ಷಗಳ ಅತ್ಯಾಧುನಿಕ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ  ಸಾಧನ ಸಲಕರಣೆಗಳು ಅಳವಡಿಸಿಕೊಂಡು ಬೃಹತ್ ಕಟ್ಟಡದಲ್ಲಿ ಅತ್ಯಂತ ನೈಸರ್ಗಿಕ ಬೆಳಕು, ಗಾಳಿ,ಹವಾ ನಿಯಂತ್ರಿತ  ಸುಸಜ್ಜಿತ ಬೋಧನಾ ಕೋಠಡಿಗಳು ಮತ್ತು ಗ್ರಂಥಾಲಯ ಹಾಗೂ ಪ್ರಯೋಗಾಲಯ ಹೊಂದಿರುವುದು  ಈ ಕಾಲೇಜಿನ ವಿಶೇಷತೆಯಾಗಿದೆ.  

ಅಂದು 2007ರಲ್ಲಿ ಕೇವಲ 50 ವಿದ್ಯಾರ್ಥಿಗಳಿಂದ (ವಿಜ್ಞಾನ ವಿಭಾಗ ಮಾತ್ರ) ಆರಂಭವಾದ ಈ ಕಾಲೇಜು ಪಾಲಕರ ಬಹು ಬೇಡಿಕೆ, ಒತ್ತಾಸೆಯ ಮೇರೆಗೆ ಕಾಮರ್ಸ್‌ ವಿಭಾಗ ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಸರಿಸುಮಾರು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವುದು ಐತಿಹಾಸಿಕ ದಾಖಲೆಯಾಗಿದೆ.  

ಈ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ಸರಕಾರದ ವಿವಿಧ ಇಲಾಖೆಗಳಲ್ಲಿ ವೈದ್ಯರು, ವಿಜ್ಞಾನಿಗಳು, ಇಂಜಿನಿಯರರು, ಉಪನ್ಯಾಸಕರು, ವೈದ್ಯ ಉಪನ್ಯಾಸಕರು ಕೃಷಿ ವಿಜ್ಞಾನಿಗಳು, ನ್ಯಾಯಾಧೀಶರು  ಮತ್ತಿತರ ಕ್ಷೇತ್ರಗಳಲ್ಲಿ  ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಈ ಕಾಲೇಜಿನ ಹೆಮ್ಮೆಯ ಸಂಗತಿ.  

ಕಳೆದ ವರ್ಷ ಪಿಯುಸಿ ಪ್ರಥಮ ಹಾಗೂ ದ್ವಿತೀಯ ತರಗತಿಗಳಲ್ಲಿ 400 ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿರುವುದು ಕಾಲೇಜಿನ ಹೆಗ್ಗಳಿಕೆಗೆ ಇಂದಿಗೂ  ಸಾಕ್ಷಿಯಾಗಿ ಸಾಗುತ್ತಿದೆ.  

 ಕಳೆದ ಮಾರ್ಚ್‌ ಏಪ್ರಿಲ್ 2024 ರಲ್ಲಿ ಜರುಗಿದ ಪಿ,ಯು,ಸಿ,  ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ 3ನೇ ಹಾಗೂ 10ನೇ ಸ್ಥಾನ ಪಡೆದಿರುವುದು ಸಂತಸದ ವಿಷಯ. ಹಾಗೂ ಇದೇ ಸಾಲಿನಲ್ಲಿ  6, ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ. ಈ ವರ್ಷವೂ ಸಹ ಅತ್ಯುತ್ತಮ ಫಲಿತಾಂಶ ಬಂದಿದ್ದು, ಜೆಇಇ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪಿಯು ಪಠ್ಯದ ಜೊತೆಗೆ ಕಾಲೇಜಿನಲ್ಲಿ ನೀಟ್,ಸಿಇ ಟಿ, ಜೆ.ಇ. ಇ, ಸ್ಪರ್ಧಾತ್ಮಕ ಪರೀಕ್ಷೆ ವಿಶೇಷ ಒತ್ತು ಕೊಟ್ಟು ನುರಿತ ಉಪನ್ಯಾಸಕರಿಂದ ವಿಶೇಷ ಬೋಧನೆಗೆ ಅವಕಾಶ ಕಲ್ಪಿಸಲಾಗುತ್ತಿದೆ.  

 ಶಿಕ್ಷಣ ಮತ್ತು ಅಂಕಗಳಿಗೆ ಮಾತ್ರ ಸೀಮಿತವಾಗದಿರುವ ಇಂದಿನ ವಿದ್ಯಾರ್ಥಿಗಳು, ಪ್ರತಿವರ್ಷವು, ನಡೆಯುವ ವೈಶಿಷ್ಟತೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು   

ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಪ್ರತಿಬಿಂಬಿಸುವ ಸಮಗ್ರ ಸಂಸ್ಕೃತಿಯ ಕಲೆಗಳು ಪ್ರದರ್ಶಿಸುವ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲೆ, ಅಂತರ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ  ಕಾರ್ಯಕ್ರಮಗಳಲ್ಲಿ ಪ್ರತಿನಿಧಿಸುವ ವಿದ್ಯಾರ್ಥಿಗಳು ಹತ್ತು ಹಲವು ಪ್ರಶಸ್ತಿಗಳು ಪಡೆದು,  ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. 

ನ್ಯಾಯವಾದಿ ಪಿ. ಆರ್‌. ಪಾಟೀಲ್

ಸಂಸ್ಥೆಯ ಚೇರ್ಮನ್,