ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ
Deputy Commissioner visits various villages in Naragund taluk and inspects crops
ಲೋಕದರ್ಶನ ವರದಿ
ಗದಗ 18: 2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆ0ುಲ್ಲಿ 3,13,719 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದು, ಇದುವರೆಗೂ 2,57,401 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ0ಾಗಿರುತ್ತದೆ. ಜಿಲ್ಲೆ0ುಲ್ಲಿ 1ನೇ ಜೂನ್ 2026 ರಿಂದ 16ನೇ ಜುಲೈ 2026 ರವರೆಗೆ 121.4 ಮಿ.ಮೀ. 0ುಷ್ಟು ವಾಡಿಕೆ ಮಳೆಗೆ 82.50 ಮಿ.ಮೀ. ನಷ್ಟು ವಾಸ್ತವಿಕವಾಗಿ ಮಳೆ0ಾಗಿದ್ದು, ಶೇ. -32.04 ರಷ್ಟು ಮಳೆ0ು ಕೊರತೆ0ಾಗಿದೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲೆ0ುಲ್ಲಿ ವಾಡಿಕೆಗಿಂತ ಕಡಿಮೆ ಮಳೆ0ಾಗಿರುವುದರಿಂದ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಜಿಲ್ಲೆ0ು ವಿವಿಧ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಬೆಳೆ ಪರಿಸ್ಥಿತಿ0ು ಕುರಿತು ಅವಲೋಕನ ಮಾಡಿದರು. ಜಿಲ್ಲೆ0ು ನರಗುಂದ ತಾಲೂಕಿನ ಕಲಕೇರಿ ಹಾಗು ಹದಲಿ ಗ್ರಾಮಗಳಿಗೆ ಭೇಟಿ ನೀಡಿ ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಹಾಗೂ ಹತ್ತಿ ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ ಮಳೆ0ು ಕೊರತೆಯಿಂದಾಗಿ ಒಣಗುತ್ತಿರುವ ಮತ್ತು ಬಾಡುತ್ತಿರುವ ಬೆಳೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಮೀನಿನಲ್ಲಿ ನೆರೆದಿದ್ದ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಮಳೆ ಅಭಾವದಿಂದ ಎದುರಾಗಿರುವ ಸಮಸ್ಯೆ0ು ಕುರಿತು ಮಾಹಿತಿ ಪಡೆದುಕೊಂಡರು. ಸಂಕಷ್ಟದಲ್ಲಿರುವ ಜಿಲ್ಲೆ0ು ರೈತರಿಗೆ ಧೈ0ುರ್ ತುಂಬಿದರು. ಈ ಸಂದರ್ಭದಲ್ಲಿ ಜಿಲ್ಲೆ0ುಲ್ಲಿ ಬೆಳೆದ ವಿವಿಧ ಬೆಳೆಗಳ ಬಿತ್ತನೆ ಪ್ರದೇಶದ ನಿಖರ ಮಾಹಿತಿ ಪಡೆ0ುಲು ಜಿಲ್ಲೆ0ು ಸಮಸ್ತ ರೈತರು ಬೆಳೆ ಸಮೀಕ್ಷೆ ಆಪ್ ಮೂಲಕ ಬೆಳೆ ಸಮೀಕ್ಷೆ0ುನ್ನು ಪೂರ್ಣಗೊಳಿಸಲು ತಿಳಿಸಿದರು. ಇದರಿಂದ ಜಿಲ್ಲೆ0ುಲ್ಲಿ ಬೆಳೆದ ವಿವಿಧ ಬೆಳೆಗಳ ಬಿತ್ತನೆ ಪ್ರದೇಶದ ನಿಖರ ಮಾಹಿತಿ0ುನ್ನು ಸರ್ಕಾರದ ಗಮನಕ್ಕೆ ತರಲು ಅನುಕೂಲವಾಗುವುದಾಗಿ ವಿವರಿಸಿದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ 0ೋಜನೆ0ುಡಿ ಬೆಳೆ ಸಾಲ ಪಡೆದ ರೈತರಿಗೆ (ಬ್ಯಾಂಕ್ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಹೆಸರು (ಮಳೆಆಶ್ರಿತ) ಹಾಗೂ ಹತ್ತಿ (ಮಳೆಆಶ್ರಿತ ್ಘ ನೀರಾವರಿ) ಬೆಳೆಗಳಿಗೆ ಬೆಳೆ ವಿಮೆಗೆ ನೋಂದಾಯಿಸಲು 22-07-2026 ರವರೆಗೆ ಅವಕಾಶ ಇರುತ್ತದೆ. ಸದರಿ ಅವಕಾಶವನ್ನು ಬೆಳೆ ಸಾಲ ಪಡೆದ ರೈತರು ಸದುಪ0ೋಗಪಡಿಸಿಕೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಹಶೀಲ್ದಾರರು, ಅಧಿಕಾರಿಗಳು, ಸಿಬ್ಬಂದಿ, ರೈತ ಮುಖಂಡರು ಹಾಜರಿದ್ದರು.
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ 