ಹೊಗೆ ಮಿಶ್ರಿತ ದಟ್ಟ ಮಂಜು: ವಾಹನ ಸವಾರರ ಪರದಾಟ
Dense fog mixed with smoke: Motorists struggle
ಬೆಟಗೇರಿ 08: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಿಂದ ಬೆಳಗ್ಗೆ ಸುಮಾರು ಎರಡ್ಮೂರು ಗಂಟೆಗಳ ಕಾಲ ರಸ್ತೆಯ ಅಕ್ಕ-ಪಕ್ಕ, ಎದುರುಗಡೆ ಬರುವ ವಾಹನ, ಪಾದಚಾರಿಗಳು ಕಾಣದ ಹಾಗೇ ಹೊಗೆ ಮಿಶ್ರಿತ ನೀರು ಮಂಜು ಬಿಳುತ್ತಿರುವದರಿಂದ ವಾಹನ ಸವಾರರಿಗೆ ಮತ್ತು ಇಲ್ಲಿಯ ರೈತರಿಗೆ ಆತಂಕ ಎದುರಾಗಿದೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ನ.8ರಂದು ಬೆಳಗ್ಗೆ 6ಗಂಟೆಯಿಂದ 8 ಗಂಟೆವರೆಗೆ ಹೊಗೆ ಮಿಶ್ರಿತ ನೀರು ಮಂಜು ಬಿದ್ದಿದ್ದರಿಂದ ಇಲ್ಲಿಯ ಮುಖ್ಯ ರಸ್ತೆಗಳ ಮೇಲೆ ಸಂಚರಿಸುವ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನ ಚಾಲಕರು ಮುಂದೆ ಸಾಗಲು ದಾರಿ ಕಾಣದೇ ಹರಸಾಹಸ ಮಾಡುವಂತಾಗಿತ್ತು.
ಒಂದಡೆ ಇಲ್ಲಿಯ ರಸ್ತೆಗಳ ಮೇಲೆ ವಾಹನ ಸವಾರರು ಜೀವಭಯದಲ್ಲಿ ಓಡಾಡುವ ದುಸ್ಥಿತಿ ಎದುರಾದರೆ, ಇನ್ನೂಂದಡೆ ಮಂಜು ಆವರಿಸುತ್ತಿವುದರಿಂದ ಭೂಮಿಯಲ್ಲಿದ್ದ ಕೆಲವು ಬೆಳೆಗಳು ಹಾಗೂ ಕೆಲವು ತೋಟಗಾರಿಕೆ ಬೆಳೆಗಳು ಹಾಳಾಗುವ ಆತಂಕದ ಪರಿಸ್ಥಿತಿ ಸ್ಥಳೀಯ ರೈತರನ್ನು ಚಿಂತಿತರನ್ನಾಗಿಸಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಒಂದಿಲ್ಲೊಂದು ಪ್ರಕೃತಿ ವಿಕೂಪಕ್ಕೆ ರೈತರು ತುತ್ತಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಹೊಗೆ ಅಥವಾ ನೀರಿನ ಮಂಜು ನಿತ್ಯ ಹೀಗೆಯೇ ಬೀಳುವುದರಿಂದ ತೋಟಗಾರಿಕೆ ಕೆಲವು ಬೆಳೆಗಳ ಹೂವು ಕಾಯಿ ಹಿಡಿಯದೇ ಕತ್ತರಿಸಿ ನೆಲಕ್ಕೆ ಬಿದ್ದು ಬೆಳೆಗಳು ಪೂರ್ಣ ಹಾಳಾಗುತ್ತವೆ. ಇದಕ್ಕೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರಿಗೆ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಅಂಬುವುದು ಸ್ಥಳೀಯರ ಒತ್ತಾಯವಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 