ಸರ್ಕಾರಿ ಶಾಲಾ-ಕಾಲೇಜು, ಹಾಸ್ಟೆಲ್ ಬಲವರ್ಧನೆಗೆ ಒತ್ತಾಯ: ಎಸ್‌ಎಫ್‌ಐ ಸಮ್ಮೇಳನ

ಸರ್ಕಾರಿ ಶಾಲಾ-ಕಾಲೇಜು, ಹಾಸ್ಟೆಲ್ ಬಲವರ್ಧನೆಗೆ ಒತ್ತಾಯ: ಎಸ್‌ಎಫ್‌ಐ ಸಮ್ಮೇಳನ  Demand to strengthen government schools, colleges, and hostels: SFI conference

ಹಾವೇರಿ, ಆಗಸ್ಟ್‌ 14: ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್ಗಳ ಬಲವರ್ಧನೆ ಸೇರಿದಂತೆ ತಾಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ತಾಲೂಕು ವಿದ್ಯಾರ್ಥಿಗಳ 10ನೇ ಸಮ್ಮೇಳನ ಗುರುವಾರ ಭಗತ್ ಅಕಾಡೆಮಿಯಲ್ಲಿ ನಡೆಯಿತು.  ಸಮ್ಮೇಳನದಲ್ಲಿ ಹಾವೇರಿ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ದ್ಯಾಮಣ್ಣ ಆರೇರ, ಕಾರ್ಯದರ್ಶಿಯಾಗಿ ಶೋಭಾ ದೇವರಮನಿ, ಉಪಾಧ್ಯಕ್ಷರಾಗಿ ವೀರನಗೌಡ ಹಾಗೂ ಸಾವಿತ್ರಿ ವಾಲ್ಮೀಕಿ ಆಯ್ಕೆಯಾದರು.  

ಸಹ ಕಾರ್ಯದರ್ಶಿಗಳಾಗಿ ಅಜಯ್ ಎನ್‌.ಬಿ., ಗೌತಮ್ ಮಲಾಪುರ, ದೀಪಾ ಹೊಸಮನಿ, ರಿಯಾನ್ ನದಾಫ್, ಸುಕನ್ಯಾ ಮಾಳಪ್ಪನವರ ಹಾಗೂ ನಂಜುಂಡ ಬಲಿಗಾರ ಆಯ್ಕೆಯಾದರು. ಸದಸ್ಯರಾಗಿ ವಿಕಾಸ ದುರಗಣ್ಣನವರ, ಧನುಷ್ ದೊಡ್ಡಮನಿ, ವಿಜಯಲಕ್ಷ್ಮಿ ಎಂ. ಮತ್ತು ಪ್ರಿಯಾಂಕಾ ಮಹೇಂದ್ರಕರ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಯಿತು.  ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್‌. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.