ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಗೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ
ಹೂವಿನಹಡಗಲಿ 12 : ಮೆಕ್ಕೆಜೋಳ, ಭತ್ತ, ಸೇರಿದಂತೆ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಹಾಗೂ ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಅವಳಿ ಭಾರತೀಯ ಕಿಸಾನ್ ಸಂಘದಿಂದ ಸೋಮವಾರ ಪ್ರತಿಭಟಿಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಸಿಂ.ಏ.ನೀ.ಯೋಜನೆ ಸಂತ್ರಸ್ತರಿಗೆ ಪರಿಹಾರ, ನಿರಂತರ ವಿದ್ಯುತ್ , 3 ಸೇಂಟ್ಸ್ ನಿಂದ 20 ರವರೆಗೆ ನೋಂದಣಿಗೆ ಸೇರಿದಂತೆ ರೈತ ರ ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು. ಸಂಘದ ಅಧ್ಯಕ್ಷ ವಿ.ಬಿ.ಕೊಟ್ರೇಶ ಮಾತನಾಡಿಜಾನುವಾರು ಗಳಿಗೆ ಮುಂಜಾಗ್ರತಾ ಕ್ರಮ ಲಸಿಕೆಯನ್ನು ನೀಡಬೇಕು ಜತೆಗೆ ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಚಿಕ್ಕ ವೀರ್ಪ, ಬಿ.ಅಂಜಿನಪ್ಪ, ಶಿವಪ್ರಕಾಶ್, ಮಾರ್ಪ, ಕಡಾರಿ ಚಂದ್ರ್ಪ, ಬೋವಿ ಹನುಮಂತಪ್ಪ, ಹುಲಗಪ್ಪ ಇದ್ದರು.