ಹೂವಿನ ಹಡಗಲಿ

ಒಳ ಮೀಸಲಾತಿ ಜಾರಿಗೆ ತರಲು ಒತ್ತಾಯ

ಒಳ ಮೀಸಲಾತಿ ಜಾರಿಗೆ ತರಲು ಒತ್ತಾಯ

ಹೂವಿನಹಡಗಲಿ 18: ನ್ಯಾ.ನಾಗಮೋಹನದಾಸ್ ಆಯೋಗ ವರದಿಯನ್ನು ಅಂಗೀಕರಿಸಿ ಒಳಮೀಸಲಾತಿ ಶೀಘ್ರವಾಗಿ ಜಾರಿಗೊಳಿಸಲು ವಿಧಾನಸಭೆಯಲ್ಲಿ ಬೆಂಬಲ ನೀಡಬೇಕು ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ಸಮಿತಿಯ ಪದಾಧಿಕಾರಿಗಳು, ಮುಖಂಡರು  ಶಾಸಕರ ಜನ ಸಂಪರ್ಕ ಕಚೇರಿ ಯಲ್ಲಿ ಆಪ್ತ ಸಹಾಯಕ ಅರುಣಿ ಸುರೇಶ್  ಸೋಮವಾರ ಮನವಿ ಸಲ್ಲಿಸಿದರು. 

ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಒಳಮೀಸಲಾತಿಯನ್ನು ರಾಜ್ಯ ಸರ್ಕಾರವೇ ಜಾರಿಗೊಳಿಸಬಹುದು ಎಂದು ಸುಪ್ರಿಂಕೋರ್ಟ್‌ ತೀರ​‍್ು ನೀಡಿ  ವರ್ಷ ಕಳೆದರೂ ಸರ್ಕಾರ ಕಾಲಹರಣ ಮಾಡಿಕೊಂಡಿರುವುದು ಸಮುದಾಯದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದರು. ಒಳಮೀಸಲಾತಿ ಜಾರಿ ಆಗುವವರೆಗೆ ಉದ್ಯೋಗ. ಅವಕಾಶಗಳನ್ನು ನಿಲ್ಲಿಸಲಾಗಿದೆ ಕೂಡಲೇ ಸಿಎಂ. ಸಿದ್ದರಾಮಯ್ಯನವರು ಕಾಲಹರಣ ಮಾಡದೇ 19ರಂದು ನಡೆಯುವ. ಸಂಪುಟ ಸಭೆಯಲ್ಲಿ ಜಾರಿಗೊಳಿಸದೇ ಸಭೆಯಲ್ಲಿ ಸಮಿತಿ ರಚಿಸಿದರೆ ಉಗ್ರ ಹೋರಾಟ ಮಾಡುವುದಾಗಿದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಸಮಿತಿ ಅಧ್ಯಕ್ಷ ಕೆ.ದುರುಗೇಶ, ಎಸ್‌.ನಿಂಗರಾಜ, ಲಲಿತಮ್ಮ, ಪಿ.ನಿಂಗಪ್ಪ, ಮಂಜಪ್ಪ, ಕಗ್ಗಲಪ್ಪ ಇದ್ದರು. 


ಸುದ್ದಿ ಓದಿ