ಯರಗಟ್ಟಿಯನ್ನ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲು ಆಗ್ರಹ
Demand to declare Yaragatti as district headquarters
ಯರಗಟ್ಟಿ 08: ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಯರಗಟ್ಟಿಯನ್ನ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಈಗ ಹೆಚ್ಚುತ್ತಿದ್ದು, ಹೋರಾಟ ರಚಿಸುವ ಮೂಲಕ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಮವಾರ ಮಧ್ಯಾಹ್ನ ಪಟ್ಟಣದ ಹಲವು ಸಂಘಟನೆಗಳು ಮಹತ್ವದ ತೀರ್ಮಾನ ಕೈಗೊಂಡರು. ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮೂಲಕ ಮಾನ್ಯ ರಾಜ್ಯ ಪಾಲರಿಗೆ, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಿದರು.
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿಯಾದ ವ್ಹಿ. ಜಿ. ಬಿರಾದಾರ ಪಾಟೀಲ ಮಾತನಾಡಿ, ಜಿಲ್ಲಾ ಕೇಂದ್ರದ ವಿಚಾರದಲ್ಲಿ ಯಾವುದೇ ತ್ಯಾಗಕ್ಕೂ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯಯುತ್ತ ಬೇಡಿಕೆ ಇಡೆರಿಸಲು ಒತ್ತಾಯ ಮಾಡಲಾಗುವುದು. ಯರಗಟ್ಟಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲು ಜಿಲ್ಲಾ ಹೋರಾಟ ಸಮಿತಿ ಸಿದ್ದವಿದೆ. ಸಂಘಟನೆಗಳು ರೂಪಿಸುವ ಚಳವಳಿ ಮತ್ತು ನ್ಯಾಯಯುತ ಹೋರಾಟವನ್ನು ಮಾಡಲು ಕರೆ ನೀಡಲಾಗುವುದು ಎಂದರು.
ಯರಗಟ್ಟಿ ಸಾಂಸ್ಕೃತಿಕ ಆರ್ಥಿಕವಾಗಿ, ಹಾಗೂ ಸಾಮಾಜಿಕ, ರಾಜಕೀಯವಾಗಿ ಬಲಿಷ್ಠವಿದ್ದೆ ಜನಸಂಖ್ಯೆ, ವಿಸ್ತೀರ್ಣ, ಸಂಪರ್ಕ, ಶಿಕ್ಷಣ, ಕೈಗಾರಿಕೆ, ಕಂದಾಯ ಸಂಗ್ರಹ, ಉದ್ಯೋಗ ಅವಕಾಶ ಬೆಳಗಾವಿ ಜಿಲ್ಲೆಯಲ್ಲೆಯೇ ಯರಗಟ್ಟಿ ಸಾಕಷ್ಟು ಮುಂದಿರುವ ಕ್ಷೇತ್ರ. ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ.
ಜಿಲ್ಲೆಯಾದರೆ ನಾವೂ ಆ ಜಿಲ್ಲೆಗೆ ಸೇರುತ್ತೇವೆ ಎನ್ನುವ ಮಾತು ಜನರೂಡಿಯಾಗಿದೆ. ಹಿಂದಿನಿಂದಲೂ ಯರಗಟ್ಟಿ ಬಹುದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ನಮ್ಮ ಯರಗಟ್ಟಿ. ಬ್ರಿಟಿಷರ ನೆಚ್ಚಿನ ವ್ಯಾಪಾರ ಕೇಂದ್ರವು ಯರಗಟ್ಟಿ ಯಾಗಿತ್ತು ಎಂದು ತಿಳಿಸಿದರು.
ಈ ವೇಳೆ ಉಪಾಧ್ಯಕ್ಷರಾಗಿ ವಾಯ್. ಬಿ. ನರಿ, ಕಾರ್ಯದರ್ಶಿಯಾಗಿ ಎಸ್. ಆರ್. ರೆಬ್ಬನ್ನವರ, ಖಜಾಂಚಿಯಾಗಿ ಆಯ್. ಬಿ. ಗೌಡರ, ಸಂಚಾಲಕರಾಗಿ ಎಮ್. ಆರ್. ಅಡಕಿ, ಸದಸ್ಯರಾಗಿ ಸಿ. ಬಿ. ಯಡಹಳ್ಳಿ, ಎನ್. ಆಯ್. ನೇಗಿನಾಳ, ವ್ಹಿ. ಬಿ. ಹೊಸಮನಿ, ವ್ಹಿ. ಎನ್. ಯರಡ್ಡಿ, ಆಯ್. ಎಚ್. ಹುಲ್ಲೂರ, ಮಾಜಿ ಗ್ರಾ. ಪಂ. ಅಧ್ಯಕ್ಷ ಸುರೇಶ ಬಂಟನೂರ, ನಿವೃತ್ತ ತಹಶೀಲ್ದಾರ ಬಾಬಣ್ಣಾ ತಳವಾರ, ರೈತ ಸಂಘದ ಜಿಲ್ಲಾಧ್ಯಕ್ಷ ಸೋಮು ರೈನಾಪೂರ, ನಾರಯಣಗೌಡ ಪಾಟೀಲ, ದಲಿತ ಮುಖಂಡ ಚಿದಂಬರ ಕಟ್ಟಿಮನಿ, ಸುರೇಶ ಉದ್ದಪ್ಪನ್ನವರ, ಸುರೇಶ ರೈನಾಪೂರ, ಸೇರಿದಂತೆ ಇದ್ದರು.
ಬೆಳಗಾವಿ ಜಿಲ್ಲೆಯ ಅನುಕೂಲಕ್ಕಾಗಿ ಯರಗಟ್ಟಿಯನ್ನು ಜಿಲ್ಲೆಯಾಗಿ ಘೋಷಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಮತ್ತು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ವ್ಹಿ. ಜಿ. ಬಿರಾದಾರಪಾಟೀಲ, ಅಧ್ಯಕ್ಷರು, ಜಿಲ್ಲಾ ಹೋರಾಟ ಸಮಿತಿ, ಯರಗಟ್ಟಿ
ಯರಗಟ್ಟಿ ಜಿಲ್ಲೆಗಾಗಿ ನಮ್ಮ ಹೋರಾಟದ ದಿಕ್ಕು ಬದಲಾಗುವ ಮೊದಲು, ಸರ್ಕಾರವು ಸೂಕ್ತ ನಿರ್ಧಾರ ತೆಗೆದುಕೊಂಡು ಬೈಲಹೊಂಗಲ ಮತ್ತು ಚಿಕ್ಕೋಡಿ, ಅಥಣಿ ಜಿಲ್ಲೆಗಳ ಬದಲಿಗೆ ಯರಗಟ್ಟಿ ಜಿಲ್ಲೆಯನ್ನು ಮಾಡುವುದು ಎಲ್ಲಾ ದೃಷ್ಟಿಕೋನಗಳಿಂದಲೂ ಉತ್ತಮವಾಗಿರುತ್ತದೆ.
ಸೋಮು ರೈನಾಪೂರ, ರೈತ ಸಂಘದ ಜಿಲ್ಲಾಧ್ಯಕ್ಷರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 