ತೊಗರಿ ಖರಿಧಿ ಕೇಂದ್ರ ಜೂನ 10 ರವರೆಗೆ ಮುಂದುವರೆಸಲು ಆಗ್ರಹ
ಲೋಕದರ್ಶನ ವರದಿ
ವಿಜಯಪುರ 14: ಹಲವಾರು ಗೊಂದಲದಿಂದ, ಚೀಲ ಸಿಗದೇ, ಸೈಟ್ ಸಮಸ್ಯೆ, ಸರ್ವರ ಸಮಸ್ಯೆ ಎಂದು ನೆಪ ಹೇಳುತ್ತಾ ಜಿಲ್ಲೆಯಲ್ಲಿ ಹಲವಾರು ರೈತರು ತೊಗರಿ ಮಾರಾಟ ಮಾಡದೇ ಇಟ್ಟುಕೊಂಡಿದ್ದಾರೆ, ಈಗ ಅವಧಿ ಮುಗಿಯಿತು ಎಂದು ಹೇಳುತ್ತಾ ಇದ್ದಾರೆ, ಕೂಡಲೇ ಜಿಲ್ಲಾಧಿಕಾರಿಗಳು ಜೂನ 10 ರವೆಗೆ ತೊಗರಿ ಖರೀಧಿ ಕೇಂದ್ರವನ್ನು ಯಾವುದೇ ಸಮಸ್ಯೆ ಇಲ್ಲದ ಹಾಗೆ ಖರೀಧಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಆಗ್ರಹ ಮಾಡಿದರು.
ಬೆಂಬಲ ಬೆಲೆಯೊಂದಿಗೆ ಖರೀಧಿ ಮಾಡಬೇಕಿರುವ ಪಿ.ಕೆ.ಪಿ.ಎಸ್ ಅಧಿಕಾರಿಗಳು ನಮಗೆ ಏನು ಸಂಬಂಧವೇ ಇಲ್ಲದಂತೆ ರೈತರೊಡನೆ ವರ್ತನೆ ಮಾಡುತ್ತಿದ್ದು, ಸಂಬಮಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿ ಸಾಧ್ಯವಿರುವ ಎಲ್ಲಾ ಕಡೆಗೆ ಖರೀಧಿ ಕೇಂದ್ರ ಆರಂಭಿಸಿದರೆ ನಷ್ಟಗೊಳ್ಳುವ ರೈತರು ಕನಿಷ್ಟ ಬೆಂಬಲೆ ಬೆಲೆಗಾದರೂ ಮಾರಾಟ ಮಾಡಿ ಸಾಲದಿಂದ ಸ್ವಲ್ಪನಾದರು ಬದುಕುಳಿಯುತ್ತಾರೆ.