ಹುಬ್ಬಳ್ಳಿ- ಜೋದಾಪುರ ನೇರ ರೈಲು ಸೇವೆಗೆ ಒತ್ತಾಯ
Demand for direct train service between Hubballi and Jodhpur
ಹುಬ್ಬಳ್ಳಿ 12: ದಕ್ಷಿಣ ಪಶ್ಚಿಮ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಎಚ್. ಸಿಂಘಿ ಅವರ ನೇತೃತ್ವದ ನಿಯೋಗವು ದಕ್ಷಿಣ ಪಶ್ಚಿಮ ರೈಲ್ವೆಯ ಮಹಾಪ್ರಬಂಧಕ ಪಿ. ಅನಂತ ಅವರನ್ನು ಭೇಟಿ ಮಾಡಿ, ಪ್ರಯಾಣಿಕರ ಸೌಲಭ್ಯ ಹಾಗೂ ರೈಲು ಸೇವೆಗಳ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಮತ್ತು ದೀರ್ಘಕಾಲದ ಬೇಡಿಕೆಗಳನ್ನೊಳಗೊಂಡ ಮನವಿಪತ್ರ ಸಲ್ಲಿಸಿತು.
ಮನವಿಯಲ್ಲಿ ಎಸ್ಎಂವಿಬಿ ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (16553) ರೈಲಿನ ಪ್ರಸ್ತುತ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ ಎಂದು ತಿಳಿಸಿ, ಅದರ ಮರುನಿಗದಿ ಮಾಡುವಂತೆ ಒತ್ತಾಯಿಸಲಾಯಿತು. ಪ್ರಸ್ತುತ ವೇಳಾಪಟ್ಟಿಯಿಂದ ಹುಬ್ಬಳ್ಳಿಗೆ ಮಧ್ಯರಾತ್ರಿ ಹಾಗೂ ಮುಂಬೈಗೆ ಹಗಲಿನಲ್ಲಿ ತಲುಪಬೇಕಾಗುತ್ತಿದ್ದು, ರೈಲನ್ನು ಮಧ್ಯಾಹ್ನ ಬೆಂಗಳೂರಿನಿಂದ ಹೊರಡಿಸಿದರೆ ಹುಬ್ಬಳ್ಳಿಗೆ ರಾತ್ರಿ ಮತ್ತು ಮುಂಬೈಗೆ ಬೆಳಿಗ್ಗೆ ತಲುಪುವಂತೆ ವ್ಯವಸ್ಥೆಯಾಗಲಿದೆ ಎಂದು ಸಿಂಘಿ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ-ಜೋದಾಪುರ ನಡುವೆ ಸಮದಡಿ- ಭಿಲ್ಡಿ ಮಾರ್ಗವಾಗಿ ನೇರ ರೈಲು ಸೇವೆ ಆರಂಭಿಸುವ ಬೇಡಿಕೆಯನ್ನು ಕೂಡ ನಿಯೋಗ ಮುಂದಿಟ್ಟಿತು. ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಾಜಸ್ಥಾನ ಮೂಲದ ಸಾವಿರಾರು ಕುಟುಂಬಗಳು ವಾಸವಾಗಿದ್ದು, ಜೋಧಪುರ, ಬಾಲೋತ್ರಾ, ಸಮದಡಿ, ಜಾಲೋರ್ ಹಾಗೂ ಸಿರೋಹಿ ಭಾಗಗಳಿಗೆ ನೇರ ರೈಲು ಸಂಪರ್ಕದ ಕೊರತೆ ಎದುರಿಸುತ್ತಿವೆ. ಹೊಸ ರೈಲು ಸೇವೆಯಿಂದ ಉತ್ತರ ಕರ್ನಾಟಕ ಮತ್ತು ಪಶ್ಚಿಮ ರಾಜಸ್ಥಾನ ನಡುವಿನ ಸಂಪರ್ಕ ಬಲವಾಗಲಿದೆ ಎಂದು ತಿಳಿಸಲಾಯಿತು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 