ಹುಬ್ಬಳ್ಳಿಯಿಂದ ಅಹಮದಾಬಾದ್, ಜೋಧಪುರ, ವಾರಾಣಸಿಗೆ ನೇರ ವಿಮಾನಕ್ಕೆ ಒತ್ತಾಯ

ಹುಬ್ಬಳ್ಳಿಯಿಂದ ಅಹಮದಾಬಾದ್, ಜೋಧಪುರ, ವಾರಾಣಸಿಗೆ ನೇರ ವಿಮಾನಕ್ಕೆ ಒತ್ತಾಯ  Demand for direct flights from Hubballi to Ahmedabad, Jodhpur, and Varanasi

ಲೋಕದರ್ಶನ ವರದಿ 

ಹುಬ್ಬಳ್ಳಿ 29: ಉತ್ತರ ಕರ್ನಾಟಕದ ವಾಯು ಸಂಪರ್ಕ ಬಲಪಡಿಸುವ ನಿಟ್ಟಿನಲ್ಲಿ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ಹುಬ್ಬಳ್ಳಿಯಿಂದ ಅಹಮದಾಬಾದ್, ಜೋಧಪುರ ಹಾಗೂ ವಾರಾಣಸಿಗೆ ನೇರ ವಿಮಾನ ಸೇವೆ ಆರಂಭಿಸುವಂತೆ ಮನವಿ ಮಾಡಿತು. ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆಯೂ ಮನವಿ ಸಲ್ಲಿಸಲಾಯಿತು.