ಹೂವಿನ ಹಡಗಲಿ

ಬೆಂಗಳೂರಿನಿಂದ ಬಿಡುವ ಸಾರಿಗೆ ಬಸ್ ಮಾರ್ಗ ಬದಲಾವಣೆ ಗೆ ಒತ್ತಾಯ

ಬೆಂಗಳೂರಿನಿಂದ ಬಿಡುವ ಸಾರಿಗೆ ಬಸ್ ಮಾರ್ಗ ಬದಲಾವಣೆ ಗೆ ಒತ್ತಾಯ


ಲೋಕದರ್ಶನ ವರದಿ 

ಹೂವಿನಹಡಗಲಿ 26-   ಬೆಂಗಳೂರಿಂದ ಸಂಜೆ 6.30ಕ್ಕೆ ಬಿಡುವ ಸಾರಿಗೆ ಬಸ್ ಹಡಗಲಿಯ  ಹೊಳಗುಂದಿ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈಚೆಗೆ ಬೆಂಗಳೂರು ಸಾರಿಗೆ ಬಸ್ ಸೋಗಿ ಮಾರ್ಗ  ಬದಲಾವಣೆ ಮಾಡಿದ್ದಾರೆ ಆದರೆ ಹೂವಿನಹಡಗಲಿ ಹೊಳಗುಂದಿ, ಬಾವಿಹಳ್ಳಿ, ಬನ್ನಿಕಲ್ಲು, ಗದ್ದಿಕೇರಿ ಹಾಗು ಕೊಂಡೇನಹಳ್ಳಿ ನಾಗರೀಕರಿಗೆ ಕಳೆದ 15 ದಿನಗಳಿಂದ ತೊಂದರೆ ಯಾಗಿದೆ.  ಬೆಳಿಗ್ಗೆ 6.30 ಕ್ಕೆ ಬೆಂಗಳೂರು ನಿಂದ ಹೂವಿನಹಡಗಲಿ ಬಸ್ ಸೊಗಿ ಮಾರ್ಗ ವಾಗಿ ಬದಲಾವಣೆ ಮಾಡಿದ್ದಾರೆ. ಕೂಡಲೇ ಹೊಳಗುಂದಿ ಮಾರ್ಗ  ಅನುಕೂಲ ವಾಗುಂತೆ ಪ್ರಯಾಣಿಕರಿಗೆ, ವಿದ್ಯಾರ್ಥಿ ಗಳಿಗೆ ಸಾರಿಗೆ ಸೌಲಭ್ಯ ವನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಹೊಸ ಮಾರ್ಗ ವಿಸ್ತರಣೆ ಮನವಿ ;ಗ್ರಾಮೀಣ ಭಾಗದ ಜನರಿಗೆ ಹತ್ತಿರದ ನಗರಗಳಿಗೆ ನೇರ ಬಸ್ ಸೌಲಭ್ಯ ಒದಗಿಸಲು ಪ್ರಯಾಣಿಕರಿಗೆ, ವಿದ್ಯಾರ್ಥಿ ಗಳಿಗೆ ಅನುಕೂಲವಾಗುವಂತೆ ತಾಲ್ಲೂಕಿನ ಹೊಳಗುಂದಿ ಬಾವಿಹಳ್ಳಿ 8 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು,  ಹೊಳಗುಂದಿ ಯಿಂದ ಬೆಳಿಗ್ಗೆ 06 ಗಂಟೆಗೆ ಹೂವಿನಹಡಗಲಿ ಮಾರ್ಗವಾಗಿ  ದಾವಣಗೆರೆ, ಹಾವೇರಿ ಮತ್ತು ಗದಗ ನಗರಗಳಿಗೆ ಹೋಗಲು ಪ್ರಯಾಣಿಕರಿಗೆ ಅನುಕೂಲ, ಶಾಲಾ-ಕಾಲೇಜು  ಅಥವಾ ಆಸ್ಪತ್ರೆ ಗಳಿಗೆ ಸರಿಯಾದ ಸಂಪರ್ಕ ಇಲ್ಲದಿರುವ  ಕಾರಣ ಸಾರಿಗೆ ಬಸ್ ಮಾರ್ಗ  ವಿಸ್ತರಣೆ  ಮಾಡಿಕೊಡಬೇಕು ಎಂದು ಇಲ್ಲಿನ ಸಾರಿಗೆ ವ್ಯವಸ್ಥಾಪಕ ರಿಗೆ ಹೊಳಗುಂದಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. 


ಸುದ್ದಿ ಓದಿ