ಗದಗ ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಆಗ್ರಹ

ಗದಗ ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಆಗ್ರಹ  Demand for appointment of Gadag District Waqf Board Chairman


ಗದಗ, ಸೆ.5: ಗದಗ ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷರ ಹುದ್ದೆ ಸುಮಾರು ಎರಡು ವರ್ಷಗಳಿಂದ ಖಾಲಿಯಿದ್ದು, ಸರ್ಕಾರವು ಯಾವುದೇ ವಿಳಂಬ ಮಾಡದೆ ಅರ್ಹ ಹಾಗೂ ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಶೀಘ್ರ ನೇಮಕ ಮಾಡಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಆಗ್ರಹಿಸಿದೆ.  

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾಸಭಾ ಮುಖಂಡ ಜಾಫರ್ ದಾಲಾಯತ್, ಜಿಲ್ಲಾ ವಕ್ಫ್‌ ಮಂಡಳಿಗೆ ಅಧ್ಯಕ್ಷರಿಲ್ಲದ ಕಾರಣ ವಕ್ಫ್‌ ಆಸ್ತಿಗಳ ಸಂರಕ್ಷಣೆ, ನಿರ್ವಹಣೆ, ಅಭಿವೃದ್ಧಿ ಹಾಗೂ ವಿವಿಧ ಆಡಳಿತಾತ್ಮಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.  

ಜಿಲ್ಲೆಯಲ್ಲಿರುವ ವಕ್ಫ್‌ ಆಸ್ತಿಗಳು ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ಆಸ್ತಿಗಳಾಗಿವೆ. ಅವುಗಳ ಸಮರ​‍್ಕ ಸಂರಕ್ಷಣೆ ಮತ್ತು ನಿರ್ವಹಣೆಗೆ ಜವಾಬ್ದಾರಿಯುತ ನಾಯಕತ್ವ ಅಗತ್ಯವಾಗಿದೆ. ವಕ್ಫ್‌ ಆಸ್ತಿಗಳ ದಾಖಲೆಗಳ ನಿರ್ವಹಣೆ, ಅತಿಕ್ರಮಣ ತಡೆ, ತೆರವು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಮನವಿಗಳ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಪೂರ್ಣ ಪ್ರಮಾಣದ ಆಡಳಿತಾತ್ಮಕ ನಾಯಕತ್ವ ಅಗತ್ಯವಿದೆ ಎಂದು ಅವರು ತಿಳಿಸಿದರು.  

ಅಧ್ಯಕ್ಷರ ನೇಮಕಾತಿ ವಿಳಂಬದಿಂದ ಜಿಲ್ಲೆಯ ವಕ್ಫ್‌ ಆಸ್ತಿಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಜಿಲ್ಲಾದ್ಯಂತ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್‌ ಆಸ್ತಿಗಳಿದ್ದು, ಅವುಗಳ ರಕ್ಷಣೆ ಹಾಗೂ ಸಮರ​‍್ಕ ಉಸ್ತುವಾರಿಗೆ ಪೂರ್ಣಾವಧಿ ಅಧ್ಯಕ್ಷರ ಉಪಸ್ಥಿತಿ ಅಗತ್ಯವಾಗಿದೆ ಎಂದು ಮಹಾಸಭಾ ಒತ್ತಾಯಿಸಿತು.  

ಅಧ್ಯಕ್ಷರ ನೇಮಕದ ಜೊತೆಗೆ ಜಿಲ್ಲೆಯ ವಕ್ಫ್‌ ಆಸ್ತಿಗಳ ಸಮಗ್ರ ಮಾಹಿತಿ ಹಾಗೂ ದಾಖಲೆಗಳನ್ನು ಪರೀಶೀಲಿಸಿ, ಅಕ್ರಮ ಅತಿಕ್ರಮಣಗಳನ್ನು ತಡೆಗಟ್ಟಬೇಕು. ಈಗಾಗಲೇ ನಡೆದಿರುವ ಅತಿಕ್ರಮಣಗಳನ್ನು ಕಾನೂನುಬದ್ಧವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ವಕ್ಫ್‌ ಆಸ್ತಿಗಳ ಅಭಿವೃದ್ಧಿ ಮೂಲಕ ಸಮುದಾಯ ಹಾಗೂ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಸಮರ​‍್ಕವಾಗಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.  

ಸಂಬಂಧಪಟ್ಟ ಸಚಿವರು, ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರು ಈ ಕುರಿತು ತಕ್ಷಣ ಗಮನಹರಿಸಿ, ಗದಗ ಜಿಲ್ಲಾ ವಕ್ಫ್‌ ಮಂಡಳಿಗೆ ಅರ್ಹ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಮಹಾಸಭಾ ಒತ್ತಾಯಿಸಿತು.  

ಸುದ್ದಿಗೋಷ್ಠಿಯಲ್ಲಿ ಸೈಯದ್ ಜಹಿರುದ್ದೀನ್ ಪೀರಜಾದೆ, ಖುತುಬುದ್ದೀನ್ ಶೇಖ್, ಮೊಹಮ್ಮದ್ ಜಾಫರ್ ದಾಲಾಯತ್, ಡಾ. ಅಬ್ದುಲ್ ರಜಾಕ್ ಮಂಗಳೂರು, ರಿಯಾಜ್ ಅಹ್ಮದ್ ದೊಡ್ಡಮನಿ, ಮೆಹಬೂಬ್ ಬಾಷಾ ಖಾಜಿ, ನಿಜಾಮುದ್ದೀನ್, ಮೊಹಮ್ಮದ್ ಸಲೀಂ ಕರಡಿ, ರಿಯಾಜ್ ಅಹ್ಮದ್ ಎಟಿ, ವಾಹೀದ್ ಬೇಪಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.