ದಶಲಕ್ಷಣ ಮಹಾಪರ್ವ- ಉತ್ತಮ ಮಾರ್ಧವ ಧರ್ಮ
Dashalakshana Mahaparva – The Virtue of Supreme Gentleness (Uttama Mardava Dharma)
ಲೋಕದರ್ಶನ ವರದಿ
ಹಾವೇರಿ 18 ಹಾವೇರಿ ಭಗವಾನ 1008 ನೇಮಿನಾಥ ದಿಗಂಬರಜೈನ ಮಂದಿರಕಮೀಟಿ, ಪ. ಪೂ. ಮುನಿಶ್ರೀ 108 ಸಂಭವನಂದಿ ಮಹಾರಾಜಟ್ರಸ್ಟ, ರತ್ನತ್ರಯ ಮಹಿಳಾ ಸಮಾಜ, ಭಾರತೀಯ ಜೈನ ಮಿಲನ್, ಹಾಗೂ ಸಮ್ಯಕ್ಜ್ಞಾನಜಿನಧರ್ಮ ಪ್ರಭಾವನಾ ಯುವಕ ಸಂಘದ ಸಹಯೋಗದಲ್ಲಿ ದಶಲಕ್ಷಣ ಮಹಾಪರ್ವದ ಅಂಗವಾಗಿ ಉತ್ತಮ ಮಾರ್ಧವ ಆಚರಣೆ ಕಾರ್ಯಕ್ರಮ ಹಾವೇರಿ ನಗರದ ಬಸ್ತಿ ಓಣಿಯಲ್ಲಿರುವ ಶ್ರೀ ನೇಮಿನಾಥ ಭವನದಲ್ಲಿ ಗುರುವಾರ ಜರುಗಿತು.
ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಪದ್ಮರಾಜ ಕಳಸೂರ ಅವರು ಉತ್ತಮ ಮಾರ್ಧವ ಧರ್ಮದ ಕುರಿತು ಹಾಗೂ ಶ್ರೀಮತಿ ಸ್ಪೂರ್ತಿ ಕಬಾಡಗೆ ಅವರು ಶಕ್ತಿಸ್ತ್ಯಾಗ ಭಾವನೆ ಕುರಿತು ಉಪನ್ಯಾಸ ನೀಡಿದರು. ಭಗವಾನಶ್ರೀ 1008 ನೇಮಿನಾಥ ದಿಗಂಬರಜೈನ ಮಂದಿರ ಕಮೀಟಿ ಸದಸ್ಯ ವಿದ್ಯಾಸಾಗರ ಕಳಸೂರ ಅಧ್ಯಕ್ಷತೆ ವಹಿಸಲಿದ್ದು, ರತ್ನತ್ರಯ ಮಹಿಳಾ ಸಮಾಜದ ಕಾರ್ಯದರ್ಶಿ ಶ್ರೀಮತಿ ಸುಜಾತಾ ನಡುವಿನಮನಿ ಉಪಸ್ಥಿತರಿದ್ದರು. ಬಾಹುಬಲಿ ಪಾಟೀಲ ಸ್ವಾಗತಿಸಿದರು. ಮಂಜುನಾಥ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ರಾಹುಲ್ ರೊಟ್ಟಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 