ಇ .ಡಿ ದಾಳಿ ಖಂಡಿಸಿದ ದಲಿತ ಸಂಘರ್ಷ ಸಮಿತಿ

  ಇ .ಡಿ ದಾಳಿ ಖಂಡಿಸಿದ ದಲಿತ ಸಂಘರ್ಷ ಸಮಿತಿ  Dalit Sangharsha Samiti condemns ED raids

ಲೋಕದರ್ಶನ ವರದಿ 

  ಜಮಖಂಡಿ  16:  ಪರಿಶಿಷ್ಟ ಜಾತಿ ಸಮುದಾಯದ ಸಚಿವರು ಹಾಗೂ ಶಾಸಕರ ಮನೆಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಐಟಿ ಮತ್ತು ಇ.ಡಿ ದಾಳಿ ನಡೆಸಿ ಮಾನಸಿಕ ಒತ್ತಡ ಹೇರುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪರಶುರಾಮ ಮಾಂಗ ಆರೋಪಿಸಿದರು.  

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ನಡೆದಿರುವ ಇ.ಡಿ ದಾಳಿಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರ ಮನೆಗಳ ಮೇಲಷ್ಟೇ ಐಟಿ, ಇ.ಡಿ ದಾಳಿ ನಡೆಯುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಶಾಸಕರು ಹಾಗೂ ಸಚಿವರ ಆಸ್ತಿಗಳ ಬಗ್ಗೆ ತನಿಖೆ ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದರು.  

ಕೇಂದ್ರ ಸರ್ಕಾರದ ಈ ಕ್ರಮವನ್ನು ಜಾತಿ ವಿರೋಧಿ ನೀತಿ ಎಂದು ಆರೋಪಿಸಿದ ಅವರು, ಇದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.  ಈ ಸಂದರ್ಭದಲ್ಲಿ ಬಸು ಜಮಖಂಡಿ, ರಮೇಶ ಪೂಜಾರಿ, ಅಬುಬಕರ ಕುಡಚಿ, ನದೀಮ ಗೋರೆ, ಸುನೀಲ ಘಾಟಗೆ, ಪ್ರಕಾಶ ಜಂಬಗಿ ಹಾಗೂ ಪುಂಡಲೀಕ ಮಾದರ ಉಪಸ್ಥಿತರಿದ್ದರು.