ಜನಪರ ನಾಯಕ ಡಾಕ್ಟರ್ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಸೌಜನ್ಯತಾ ಸಮಿತಿ ಆಗ್ರಹ

ಜನಪರ ನಾಯಕ ಡಾಕ್ಟರ್ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಸೌಜನ್ಯತಾ ಸಮಿತಿ ಆಗ್ರಹ Courtesy Committee demands ministerial berth for pro-people leader Dr. HK Patil

ಲೋಕದರ್ಶನ ವರದಿ 

 ಗದಗ  09:  ಮುದ್ರಣ ನಗರಿಯಾದ ಗದಗ ಬೆಟಗೇರಿ ಅವಳಿ ನಗರವನ್ನು ಹೈಟೆಕ್ ಸೀಟಿಯನ್ನಾಗಿಸುವ ಮಹೋನ್ನತ ಕನಸಿನೊಂದಿಗೆ ಗದಗ-ಬೆಟಗೇರಿ ನಗರದ ಹೃದಯಭಾಗದಲ್ಲಿರುವ 34 ಎಕರೆ ಪ್ರದೇಶದ ಐತಿಹಾಸಿಕ ವಕಾರಸಾಲು  ಪ್ರದೇಶವನ್ನು ಅಭಿವೃದ್ಧಿಪಡಿಸುವ ಮೂಲಕ  ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ಸ್ಥಾಪನೆ, ಈ ಯೋಜನೆಯು ಜಿಲ್ಲೆಯ ವ್ಯಾಪಾರ, ಕಲೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಗುರಿಯನ್ನು ಸಾಕಾರಗೊಳಿಸುವ ಮೂಲೋದ್ದೇಶದೊಂದಿಗೆ ಕಾರ್ಯಪ್ರವೃತ್ತರಾದ ಅಭಿವೃದ್ಧಿಯ ಹರಿಕಾರರಾದ ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲರಿಗೆ ಸನ್ಮಾನ್ಯ ಡಿ ಕೆ ಶಿವಕುಮಾರ್ ಸಂಪುಟದಲ್ಲಿ  ಮಂತ್ರಿ ಸ್ಥಾನ ನೀಡದಿರುವದು ನೋವಿನ ಸಂಗತಿಯಾಗಿರುತ್ತದೆ. ಎಂದು ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ. 

ಗದಗ ವಿಧಾನಸಭಾ ಕ್ಷೇತ್ರದ ಜನಪ್ರಿಯ ಹೃದಯಸ್ಪಂಧನೆಯ ನಾಯಕರಾದ ಸನ್ಮಾನ್ಯ ಎಚ್ ಕೆ ಪಾಟೀಲರು ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯಾದ್ಯಂತ ನೀರಾವರಿ ವಿಸ್ತರಣೆ ಮತ್ತು ಮೋಡ ಬಿತ್ತನೆಯ ಪ್ರಯತ್ನದ ಮುಂದಾಳತ್ವದಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವ್ಯಾಪಕ ಪ್ರಶಂಸೆಯನ್ನು ಪಡೆದಿದವರು. ಜವಳಿ, ಪ್ರಮುಖ ನೀರಾವರಿ, ಕೃಷಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದು ಅಪಾರ ರಾಜಕೀಯ ಅನುಭವವನ್ನು ಪಡೆದವರು. ಅದರಂತೆ ಕರ್ನಾಟಕ ಸರ್ಕಾರದ ವಿರೋಧ ಪಕ್ಷದ ನಾಯಕ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ 2015-16 ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಾಗಿ ಕೇಂದ್ರ ಸರಕಾರದ  ಇ-ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಪಡೆದುಕೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 24 ಏಪ್ರಿಲ್ 2017 ರಂದು ಲಕ್ನೋದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಕರ್ನಾಟಕ ಸರ್ಕಾರ ಇಲಾಖೆಯು 2014-15 ರಿಂದ 2017-18 ರವರೆಗೆ ದಾಖಲೆಯ 4 ವರ್ಷಗಳ ಕಾಲ ಸತತವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಂಡಿರುವರು. 

ಎಚ್‌.ಕೆ. ಪಾಟೀಲರಿಗೆ ಪ್ರಮುಖ ಅತ್ಯುನ್ನತ ಖಾತೆಗಳನ್ನು ನಿರ್ವಹಿಸುವುದರ ಜೊತೆಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವವೂ ಇದೆ. ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಲ್ಲಿಯೇ ಜನಿಸಿ ಕಳೆದ 50 ವರ್ಷಗಳಿಂದ ನಿರಂತರ ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಪಡೆದಂತಹ ಗದಗ ಜಿಲ್ಲೆಯ ಸಮಸ್ತ ನಾಗರಿಕರ ಸಾಮಾಜಿಕ, ಆರ್ಥಿಕ ಸೈಕ್ಷಣಿಕ ಮತ್ತು ಆರೋಗ್ಯಾಭಿವೃದ್ಧಿಯ ಮೂಲ ಧ್ಯೇಯದೊಂದಿಗೆ ಹಗಲಿರುಳು ಶ್ರಮಿಸುತ್ತಿರುವ  ರಾಜಕೀಯ ಮುತ್ಸದ್ದಿ, ರಾಜಕೀಯ ಕ್ಷೇತ್ರದಲ್ಲಿ ಹಿರಿಯರು ಅನುಭವಿ ಚಾಣಾಕ್ಷ ರಾಜಕಾರಣಿಗಳಾದ  ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನಮಾನ ನೀಡುವ ಮೂಲಕ ಗದಗ ಜಿಲ್ಲೆಯಷ್ಟೇ ಅಲ್ಲದೇ ಸಮಸ್ತ ಉತ್ತರ ಕರ್ನಾಟಕ ಶ್ರೇಯೋಭಿವೃದ್ಧಿಗೆ ನೆರವುದಾಯಕ ಎಂದು ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.