ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ: ಕೊಲೆ ಶಂಕೆ
ಕಲಬುರಗಿ, ನ. 18: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಜಿಲ್ಲೆಯ ಚಿಂಚೋಳಿ ರಸ್ತೆಯ ರುದ್ನೂರ ಗೇಟ್ ಬಳಿ ಪತ್ತೆಯಾಗಿದೆ.
ಕಾಳಗಿ ತಾಲೂಕಿನ ಕೊಡದೂರ ನಿವಾಸಿ ಹಾವಪ್ಪ ಕುಕ್ಕುಂದಿ (32) ಸಾವನ್ನಪ್ಪಿರುವ ವ್ಯಕ್ತಿ. ರುದ್ನೂರ ಗೇಟ್ ನ ಮಹಾದ್ವಾರಕ್ಕೆ ನೇಣು ಬಿಗಿಯಲಾಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಅವರ ತಲೆಯ ಮೇಲೆ ಹಲವು ಗಾಯಗಳು ಕಂಡುಬಂದಿದೆ. ದುಷ್ಕಮರ್ಿಗಳು ಅವರನ್ನು ಬೇರೆಗೆ ಕೊಂದು ಇಲ್ಲಿಗೆ ತಂದು ನೇಣು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಹಾವಪ್ಪ, ಮೂರ್ನಾಲ್ಕು ದಿನಗಳ ಹಿಂದಷ್ಟೇ ಗಂಡು ಮಗುವಿನ ತಂದೆಯಾಗಿದ್ದ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 