ಸಹಕಾರ ಸಂಘಗಳು ರೈತರ ಜೀವಾಳ :ಶಾಸಕ ಶಿವರಾಮ ಹೆಬ್ಬಾರ್
Cooperative societies are the lifeblood of farmers: MLA Shivarama Hebbar
ಮುಂಡಗೋಡ 24: ತಾಲೂಕಿನ ಇಂದೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭ ಮಂಗಳವಾರ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್ ಅವರು, ಸಹಕಾರ ಸಂಘಗಳು ರೈತರ ಜೀವಾಳವಾಗಿದ್ದು, ಮುಂಡಗೋಡ ತಾಲೂಕಿನ ಇತಿಹಾಸದಲ್ಲೇ ಇದುವರೆಗೆ 65 ಕೋಟಿ ರೂಪಾಯಿಗೂ ಅಧಿಕ ಸಾಲ ವಿತರಣೆ ಮಾಡಿರುವುದು ದಾಖಲೆ ಇಲ್ಲದ ಸಾಧನೆಯಾಗಿದೆ ಎಂದು ಹೇಳಿದರು.
ಹಳಿಯಾಳ ತಾಲೂಕು ಮೊದಲ ಸ್ಥಾನದಲ್ಲಿದ್ದರೆ, ಮುಂಡಗೋಡ ತಾಲೂಕು ಎರಡನೇ ಸ್ಥಾನದಲ್ಲಿದೆ. ಇದರಿಂದ ತಾಲೂಕಿನ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ ಅವರು ಮಾತನಾಡಿ, ಸಹಕಾರ ಸಂಘಗಳು ರೈತರಿಗೆ ಸಮಯಕ್ಕೆ ಸರಿಯಾದ ಸಾಲ ಹಾಗೂ ಸೌಲಭ್ಯ ಒದಗಿಸುವಲ್ಲಿ ಪ್ರಮುಖವಾಗಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.ಇದಕ್ಕೂ ಮುನ್ನ ಶಾಸಕ ಶಿವರಾಮ ಹೆಬ್ಬಾರ್ ಅವರು ಇಂದೂರ ಗ್ರಾಮ ಪಂಚಾಯತಿಯ ನೂತನ ಸಭಾಭವನವನ್ನು ಉದ್ಘಾಟಿಸಿದರು.
ಈ ವೇಳೆ ತಹಶೀಲ್ದಾರ ಶಂಕರ ಗೌಡಿ, ತಾ.ಪಂ.ಇಒ ಟಿ.ವೈ. ದಾಸನಕೊಪ್ಪ, ಬಿಇಒ ಸುಮಾ ಜಿ., ಪಿಡಿಒ ಮರಾಠಿ, ಅಕ್ಷರ ದಾಸೋಹ ಅಧಿಕಾರಿ ವಾಸುದೇವ ನಾಯ್ಕ, ಇಂದೂರ ಸೊಸೈಟಿ ಅಧ್ಯಕ್ಷ ಯಮನಪ್ಪ ಬಾರಂಬೀಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಹುನಗುಂದ ಸೊಸೈಟಿ ಅಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಮ್.ನಾಯಕ್ ಮಾರ್ಕೆಟಿಯ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ್, ಕೆಂಜೋಡಿ ಗಲಬಿ, ನಾಗಭೂಷಣ ಹಾವಣಗಿ, ವೈ.ಪಿ.ಭುಜಂಗಿ, ಪರಶುರಾಮ ತಹಶೀಲ್ದಾರ, ಬಿ.ಕೆ.ಪಾಟೀಲ, ಶಾರದಾ ರಾಠೋಡ, ಡಿ.ಕೆ. ನಡಿಗೇರ, ಮಹಮ್ಮದ್ ಗೌಸ್ ದುಂಡಶಿ, ಗೋಪಾಲ ಪಾಟೀಲ, ಪ್ರದೀಪ ಚವಾಣ, ಪಿ.ಜಿ.ಪಾಟೀಲ, ದೇವು ಪಾಟೀಲ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 