ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಲ್ಕೊಡುಗೆ ಸಮಾರಂಭ

ಮುಂಡರಗಿ 09:  ಮಕ್ಕಳು ಮಾನವೀಯ ಮೌಲ್ಯಗಳೊಂದಿಗೆ ಪರೋಪಕಾರದ ಗುಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು. ಅಂದಾಗ ಮಾತ್ರ ಸಮಾಜ, ನಾಡು, ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು. 

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಹಾಗೂ ಜ.ಅ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ, ಎಸ್‌.ಎಸ್‌.ಎಲ್‌.ಸಿ. ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಲ್ಕೊಡುಗೆ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಆಶಿರ್ವಚನ ನೀಡಿದರು. 

ಪ್ರಸ್ತುತ ವರ್ಷದದಂತೆ ಅತಿಯಾಗಿ ಹಿಂದುಳಿದ ಈ ಬರದ ನಾಡಿನಲ್ಲಿ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಂಸ್ಥೆಯು ಈ ಭಾಗದ ಲಕ್ಷಾಂತರ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ತಾಲೂಕಿನ ಅಭಿವೃದ್ಧಿಗೆ ಭದ್ರ ಅಡಿಪಾಯವನ್ನು ಹಾಕಿದೆ. ಈ ಹಿನ್ನೆಲೆಯಲ್ಲಿ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆಯು ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದೆ, ಹಾಗೇ ಶತಮಾನೋತ್ಸವದ ಅಂಗವಾಗಿ ಹೊಸ ಕಟ್ಟಡಗಳ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಗದಗ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ವಿರೇಶ ಹಂಚನಾಳ ಮಾತನಾಡಿ, ಯಾವುದೇ ವಿದ್ಯಾರ್ಥಿಯು ಕೇವಲ ಶಿಕ್ಷಣ ಪಡೆದರೆ ಮಾತ್ರ ಅಭಿವೃದ್ಧಿಯೊಂದಲು ಸಾಧ್ಯವಿಲ. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಅಂದಾಗ ಮಾತ್ರ ಆ ವಿದ್ಯಾರ್ಥಿಗಳು ಸವಾಂರ್ಗೀಣ ಅಭಿವೃದ್ದಿಯಾಗಲು ಸಾದ್ಯವಾಗುತ್ತದೆ. ಹುಟ್ಟಿನಿಂದ ಯಾರು ದಡ್ಡರು, ಜಾಣರಾಗಿರುವದಿಲ್ಲಾ, ಆದ್ದರಿಂದ ಶಿಕ್ಷಣ ಕಲಿಯುವಂತಹ ವಿದ್ಯಾರ್ಥಿಗಳು ತಮ್ಮ ಗುರಿಯೊಂದಿಗೆ ಸತತ ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ತಂದೆ, ತಾಯಿ, ಗುರು, ಹಿರಿಯರಲ್ಲಿ, ಭಕ್ತಿ ಗೌರವ ಹೊಂದಬೇಕು. ಹಾಗೇ ತಾವು ಮಾಡುವಂತಹ ಕಾಯಕದಲ್ಲಿ ಕಾಯಕನಿಷ್ಠೆಯೊಂದಿಗೆ ಪ್ರಮಾಣಿಕತೆ, ಸಮಯ ಪ್ರಜ್ಞೆ, ಶ್ರದ್ಧೆ ಹಾಗೂ ಅಭಿರುಚಿ ಹೊಂದಿದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. 

ಸಮಾರಂಭದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು. 

ಕಾರ್ಯಕ್ರಮದ ಕಾಲೇಜಿನ ಮೇಲ್ವಿಚಾರಣ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ವ್ಹಿ. ಹಂಚನಾಳ ಅಧ್ಯಕ್ಷತೆಯನ್ನು ವಹಿಸಿದ್ದರು. ಸರ್ವರನ್ನು ಪ್ರಾ.ಶಿವರಾಜಸ್ವಾಮಿ ಸ್ವಾಗತಿಸಿದರೆ, ಪಿ.ಟಿ.ಉಳ್ಳಾಗಡ್ಡಿ ನಿರೂಪಿಸಿ ಕೊನೆಗೆ ಎಸ್‌.ಸಿ.ಚಕ್ಕಡಿಮಠ ವಂದಿಸಿದರು. 

ಡಾ.ಬಿ.ಜಿ.ಜವಳಿ, ಡಿ.ಡಿ.ಮೋರನಾಳ, ಎಸ್‌.ಬಿ.ಹಿರೇಮಠ, ಬಸವರಾಜ ಬನ್ನಿಕೊಪ್ಪ, ಎಸ್‌.ಬಿ.ರೋಣದ, ಬಾಬಣ್ಣ ಶಿವಶೆಟ್ಟರ, ಆರ್‌.ಎಲ್‌.ಪೋಲೀಸ್ ಪಾಟೀಲ, ಎಂ.ಜಿ.ಗಚ್ಚಣ್ಣನವರ, ಪಿ.ಎಮ್‌.ಕಲ್ಲನಗೌಡರ, ಯು.ಸಿ.ಹಂಪಿಮಠ ಮುಂತ್ತಾದವರು ಪಾಲ್ಗೊಂಡಿದ್ದರು.